ಮಕ್ಕಳ ಲಾಲನೆ ಪಾಲನೆ ಅವಕಾಶ ವಂಚಿತರಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ ಎಸ್ಪಿಬಿ
ಚೆನ್ನೈ, ಸೆಪ್ಟೆಂಬರ್26: ನನ್ನ ಮಕ್ಕಳ ಲಾಲನೆ ಪಾಲನೆ ಮಾಡುವ ಅವಕಾಶವನ್ನು ನಾನು ತಪ್ಪಿಸಿಕೊಂಡಿದ್ದೆ ಎಂದು ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಒಮ್ಮೆ ವಿಷಾದ ವ್ಯಕ್ತಪಡಿಸಿದ್ದರು.
ಕೋವಿಡ್-19 ಗೆ ದೃಢಪಟ್ಟ ನಂತರ ಆಗಸ್ಟ್ 5 ರಂದು ಚೆನ್ನೈ ಆಸ್ಪತ್ರೆಯಲ್ಲಿ ದಾಖಲಾಗಿ ಶುಕ್ರವಾರ ನಿಧನರಾದ ಬಾಲಸುಬ್ರಹ್ಮಣ್ಯಂ, ತಮ್ಮ ಬಿಡುವಿಲ್ಲದ
ಕಾರ್ಯಕ್ರಮದಿಂದಾಗಿ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಆದರೆ ಅವರ ಸಂಗೀತದ ಪ್ರಯಾಣ ಮಾತ್ರ ಅದ್ಭುತವಾಗಿತ್ತು ಎಂದು ಹೇಳಿದ್ದರು.
ಇದು ಆಶ್ಚರ್ಯಕರವಾಗಿದೆ, ನಾನು ಇಷ್ಟು ದಿನ ಹೇಗೆ ಇದ್ದೆನೆಂದು ನನಗೆ ತಿಳಿದಿಲ್ಲ. ನಾನು ತರಬೇತಿ ಪಡೆದ ಗಾಯಕನಲ್ಲ. ಈ ವಯಸ್ಸಿನಲ್ಲಿ ನಾನು ಕೆಲಸ ಪಡೆಯುತ್ತಿದ್ದೇನೆ ಮತ್ತು ಅದನ್ನು ತಲುಪಿಸಲು ಸಮರ್ಥನಾಗಿದ್ದೇನೆ ಎಂದು ಬಾಲಸುಬ್ರಹ್ಮಣ್ಯಂ ಸುಮಾರು ಐದು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.
ನನ್ನ ಮಕ್ಕಳು ಬೆಳೆಯುವುದನ್ನು ನೋಡುವುದನ್ನು ನಾನು ತಪ್ಪಿಸಿಕೊಂಡಿದ್ದೇನೆ. ನನ್ನ ಎಲ್ಲಾ 49 ವರ್ಷಗಳನ್ನು (2015 ರಲ್ಲಿ) ನಾನು ಹಾಡಿಗೆ ಅರ್ಪಿಸಿದ್ದೇನೆ . ಸರಾಸರಿ, ನಾನು ಪ್ರತಿದಿನ 11 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಹಾಗಾಗಿ ನನ್ನ ಮಕ್ಕಳ ಜೊತೆಗೆ ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದರು.
ಶಾಸ್ತ್ರೀಯ ಸಂಗೀತವನ್ನು ಕಲಿಯದಿರುವುದು ಮತ್ತು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸದಿರುವುದಕ್ಕೆ ಕೂಡ ಅವರಿಗೆ ವಿಷಾದವಿತ್ತು. ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಸಂಖ್ಯಾತ ಹಿಟ್ಗಳನ್ನು ನೀಡಿದ ಎಸ್ಪಿಬಿ, ಮೊಹಮ್ಮದ್ ರಫಿ ಅವರ ಸಾರ್ವಕಾಲಿಕ ಮೆಚ್ಚಿನ ಗಾಯಕ ಎಂದು ಎಸ್ಪಿಬಿ ಹೇಳಿದ್ದರು. ಅವರು ಎಂದು ತಾನು ಹಾಡುಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೋ ಅಂದು ಹಾಡುವುದನ್ನು ನಿಲ್ಲಿಸುವುದಾಗಿ ಹೇಳಿದ್ದರು.
ಜೀವನವು ಅವರಿಗೆ ಏನನ್ನು ಕಲಿಸಿದೆ ಎಂಬುದರ ಕುರಿತು, ಎಸ್ಪಿಬಿ, ಸರಳವಾಗಿರಿ. ವಿಷಯಗಳನ್ನು ಸಂಕೀರ್ಣಗೊಳಿಸಬೇಡಿ ಮತ್ತು ನೀವು ಅರ್ಹರಾದರೆ ಎಲ್ಲವೂ ಸರಿಯಾದ ಸಮಯದಲ್ಲಿ ದೊರಕುತ್ತದೆ ಎಂದು ಹೇಳಿದರು.