ಗಾನ ಗಾರುಡಿ, ಸಂಗೀತ ಸರದಾರ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಹೀಗಾಗಿ ಯಾವ ಸಮಯದಲ್ಲಿ ಯಾವ ಸುದ್ದಿ ಕೇಳಬೇಕಾಗುತ್ತೋ ಎಂಬ ಆತಂಕದಲ್ಲಿ ಇಡೀ ಭಾರತೀಯ ಚಿತ್ರರಂಗ ಮುಳುಗಿದೆ.
ಎಸ್ ಪಿಬಿ ಚೇತರಿಕೆಗಾಗಿ ಕೋಟ್ಯಂತರ ಅಭಿಮಾನಿಗಳು, ಸಿನಿ ಗಣ್ಯರು, ರಾಜಕೀಯ ಗಣ್ಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಮೂಲಗಳ ಪ್ರಕಾರ ಇಂದು 9 ಗಂಟೆಗೆ ಎಸ್ ಪಿಬಿ ಆರೋಗ್ಯ ಕುರಿತಾಗಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಬೇಕಿತ್ತು.
ಆದ್ರೆ ಈವರೆಗೂ ಆಸ್ಪತ್ರೆಯಿಂದ ಯಾವುದೇ ಬುಲೆಟಿನ್ ಬಿಡುಗಡೆ ಆಗಿಲ್ಲ. ಸದ್ಯ ಆಸ್ಪತ್ರೆ ಬಳಿ ನೂರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಆಸ್ಪತ್ರೆಗೆ ಎಸ್ ಪಿಬಿ ಕುಟುಂಬಸ್ಥರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದು, ಅವರಿಗೆ ಚೆನ್ನೈನ ಎಂಜಿಎಂ ಆಸ್ಪತ್ರೆಯ ಮೂರನೇ ಮಹಡಿಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಆ ಕೊಠಡಿಯಲ್ಲಿ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಅವರು ಹಾಡಿರುವ ಹಾಡುಗಳನ್ನು ಕೇಳಿಸಲಾಗುತ್ತಿದೆ.
ಅವರು ಹಾಡಿದ ಮೊದಲ ಹಾಡು, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ಪ್ಲೇ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.