ಬೆಂಗಳೂರು: ಯಡಿಯೂರಪ್ಪ ಅವರು 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ಈ ಬಾರಿ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ಮಕ್ಕಳಿಗಾಗಿ ಬಜೆಟ್ ನಲ್ಲಿ ರೂ.36,340 ಕೋಟಿ ಮೀಸಲಿಟ್ಟಿದ್ದು, ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶೇ.15ರಷ್ಟು ಹಣ ಮೀಸಲಿಟ್ಟಿದೆ. ಈ ಮೂಲಕ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುವ ಸಲುವಾಗಿ ಬರುವ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ ಜಾರಿಗೆ ತರುವ ಶಿಕ್ಷಣ ಸಚಿವರ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ.
ಬಾಲಮಂದಿರಗಳಿಗೆ ರೂ.7 ಕೋಟಿ
7 ಹೊಸ ಬಾಲಮಂದಿರಗಳ ಸ್ಥಾಪನೆ
ನೆರೆ ಪ್ರದೇಶದ ಅಂಗನವಾಡಿಗಳ ಮರು ನಿರ್ಮಾಣ
500 ಅಂಧ ವಿದ್ಯಾರ್ಥಿಗಳಿಗೆ ವಿಶೇಷ ಕಿಟ್, ಟಾಕಿಂಗ್ ಮೊಬೈಲ್
5 ಜಿಲ್ಲೆಗಳಲ್ಲಿ ತಾರಾಯಗಳ ಸ್ಥಾಪನೆ
500 ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ. ಇದಕ್ಕಾಗಿ ಮಾಸಿಕ ರೂ.1 ಸಾವಿರ ಶಿಷ್ಯ ವೇತನ