ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಚಾಲನೆಯಲ್ಲಿರುವ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಗರ್ಭಿಣಿಯರಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಮಹತ್ವದ ಕೇಂದ್ರ ಸರಕಾರದ ಯೋಜನೆ. ಈ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ಉತ್ತಮ ಪೋಷಣಾ ವ್ಯವಸ್ಥೆ, ಆರೋಗ್ಯಕರ ಗರ್ಭಧಾರಣೆ ಮತ್ತು ಮಗುವಿನ ಸುದೃಢ ಭವಿಷ್ಯಕ್ಕಾಗಿ ಹಣಕಾಸು ಸಹಾಯ ನೀಡಲಾಗುತ್ತಿದೆ.
ಇತ್ತೀಚೆಗೆ, ಸಚಿವಾಲಯವು ಈ ಯೋಜನೆಯ ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಈ ಸಮಯದಲ್ಲಿ ಅರ್ಹ ಮಹಿಳೆಯರು ತಮ್ಮ ಹೆಸರು ನೋಂದಾಯಿಸಿ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
ಯೋಜನೆಯ ಪ್ರಮುಖ ಅಂಶಗಳು:
🔹 ಮೊದಲ ಮಗು:
ಪ್ರಥಮ ಪ್ರಸವದ ವೇಳೆ ಗರ್ಭಿಣಿಯರಿಗೆ 2 ಹಂತಗಳಲ್ಲಿ ₹5,000 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಹಣವನ್ನು ಆರೋಗ್ಯ ತಪಾಸಣೆ, ಪೋಷಣಾ ಆಹಾರ ಮತ್ತು ಚಿಕಿತ್ಸಾ ಖರ್ಚುಗಳಿಗಾಗಿ ಉಪಯೋಗಿಸಬಹುದಾಗಿದೆ.
🔹 ಎರಡನೇ ಮಗು (ಹೆಣ್ಣು ಮಗು):
ಯೋಜನೆಯ ನವೀಕೃತ ಹಂತದಲ್ಲಿ ಎರಡನೇ ಹೆಣ್ಣು ಮಗುವಿಗೆ ₹6,000 ಹಣ ನೀಡಲಾಗುತ್ತದೆ. ಇದರಿಂದ ಮಕ್ಕಳ ಲಿಂಗಾನುಪಾತವನ್ನು ಸಮತೋಲನಗೊಳಿಸುವ ಉದ್ದೇಶವನ್ನೂ ಹೊಂದಿದೆ.
ಅರ್ಹತೆಯ ಅಂಶಗಳು:
ಮೊಟ್ಟಮೊದಲ ಗರ್ಭಧಾರಣೆಯ ಮಹಿಳೆಯರು (First-time mothers)
ಎರಡನೇ ಹೆಣ್ಣು ಮಗುವಿನ ಬಾಣಂತಿಯರು
ಸರ್ಕಾರಿ ನೌಕರರು ಹಾಗೂ ಖಾಸಗಿ ಉದ್ಯೋಗಿಗಳ ನೌಕರರಿಗೆ ಈ ಯೋಜನೆಯ ಸೌಲಭ್ಯ ಲಭ್ಯವಿಲ್ಲ.
ಹಣ ಪಡೆಯುವ ವಿಧಾನ:
ಈ ಯೋಜನೆಗೆ ನೋಂದಾಯಿಸಿದ ನಂತರ, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗವಾಗುತ್ತದೆ.
ಅರ್ಜಿ ಸಲ್ಲಿಸಲು ಹತ್ತಿರದ ಆಂಗನವಾಡಿ ಕೇಂದ್ರ ಅಥವಾ ಆರೋಗ್ಯ ಕೇಂದ್ರ ಸಂಪರ್ಕಿಸಬಹುದು.
ಆದಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಗರ್ಭಧಾರಣಾ ದಾಖಲಾತಿ ಇತ್ಯಾದಿ ದಾಖಲೆಗಳನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕು.
ಈ ಯೋಜನೆಯ ಮೂಲಕ ಕೇಂದ್ರ ಸರಕಾರ ಗರ್ಭಿಣಿಯರಿಗೆ ಹಣಕಾಸಿನ ಸುರಕ್ಷತೆ ಮತ್ತು ಆರೋಗ್ಯ ಭದ್ರತೆ ನೀಡಲು ಮುಂದಾಗಿದೆ. ಜನಸಾಮಾನ್ಯ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದ್ದು, ಸಮಯಕ್ಕೆ ಸರಿಯಾಗಿ ನೋಂದಾಯಿಸಿಕೊಂಡು ಯೋಜನೆಯ ಲಾಭ ಪಡೆಯುವುದು ಅತ್ಯಂತ ಅಗತ್ಯ.
ನಿಮ್ಮ ಸಮೀಪದ ಆಂಗನವಾಡಿ ಕೇಂದ್ರವನ್ನು ಸಂಪರ್ಕಿಸಿ ಮತ್ತು ಈ ಯೋಜನೆಯ ಲಾಭ ಪಡೆಯಿರಿ.








