ಬಿರುಗಾಳಿಗೆ ಸಿಲುಕಿದ ಸ್ಪೈಸ್ಜೆಟ್ ವಿಮಾನ – ಲಗೇಜ್ ಬ್ಯಾಗ್ ಬಿದ್ದು 40 ಮಂದಿ ಗಾಯ
ಭಾನುವಾರ, ಮುಂಬೈನಿಂದ ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ತೆರಳುತ್ತಿದ್ದ ಸ್ಪೈಸ್ಜೆಟ್ ಬೋಯಿಂಗ್ ಬಿ737 ವಿಮಾನ ಬಿರುಗಾಳಿ ಸಿಲುಕಿದೆ. ಪ್ರಕ್ಷುಬ್ಧತೆಗೆ ಸಿಲುಕಿತು. ಇದರಿಂದ ವಿಮಾನದಲ್ಲಿದ್ದ ಸುಮಾರು 40 ಪ್ರಯಾಣಿಕ ಮೇಲೆ ಲಗೇಜ್ ಬ್ಯಾಗ್ ಗಳು ಬಿದ್ದಿದ್ದು, ಗಾಯಗೊಂಡಿದ್ದಾರೆ. ಈ ಪೈಕಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಪೈಲಟ್ನ ಸಮಯಪ್ರಜ್ಞೆಯಿಂದಾಗಿ ವಿಮಾನವನ್ನ ಸುರಕ್ಷಿತವಾಗಿ ರನ್ವೇ ಮೇಲೆ ಇಳಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ವಿಮಾನವು ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಬೈಸಾಖಿ ಚಂಡಮಾರುತದಲ್ಲಿ ಸಿಲುಕಿಕೊಂಡಿದೆ. ನಂತರ ವಿಮಾನದ ತೀವ್ರವಾಗಿ ಅಲುಗಾಡಿದ್ದರಿಂದ ಕ್ಯಾಬಿನ್ನಲ್ಲಿ ಇರಿಸಲಾಗಿದ್ದ ಲಗೇಜ್ ಗಳು ಪ್ರಯಾಣಿಕರ ಮೇಲೆ ಬಿದ್ದಿವೆ.
Several passengers and crew members injured after a #SpiceJet Boeing B737 aircraft operating flight SG-945 flying from #Mumbai to #Durgapur encountered severe turbulence during descent on May 1. pic.twitter.com/KZBJX8o54e
— Mojo Story (@themojostory) May 2, 2022
ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ಪೈಲಟ್ ಸೀಟ್ ಬೆಲ್ಟ್ ಹಾಕಿಕೊಳ್ಳಲು ಸೂಚನೆ ನೀಡಿದ್ದಾರೆ. ಪುಡ್ ಟ್ರಾಲಿಗೆ ಡಿಕ್ಕಿ ಹೊಡೆದು ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಮಾನ ಲ್ಯಾಂಡ್ ಆದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸ್ಪೈಸ್ಜೆಟ್ ವಕ್ತಾರರು ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವ ಬಗ್ಗೆ ಮಾತನಾಡಿದ್ದಾರೆ.