ರೋಗಿಯ ಹೊಟ್ಟೆಯಲ್ಲಿತ್ತು 63 ಚಮಚ – ವೈದ್ಯರೇ ಶಾಕ್…
ವಿಚಿತ್ರ ಪ್ರಕರಣ ಒಂದರಲ್ಲಿ ವೈದ್ಯರು ರೋಗಿಯೊಬ್ಬರ ಹೊಟ್ಟೆಯಿಂದ 63 ಚಮಚಗಳನ್ನ ಹೊರತೆಗೆದಿರವ ಘಟನೆ ಉತ್ತರಪ್ರದೇಶದ ಮುಜಾಫರ್ನಗರ ಆಸ್ಪತ್ರೆಯಲ್ಲಿ ನಡೆದಿದೆ. ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ದೇಹವನ್ನ ಸ್ಕ್ಯಾನ್ ಮಾಡಿದಾಗ ವೈದ್ಯರೇ ಶಾಕ್ ಆಗಿದ್ದಾರೆ. ಹೊಟ್ಟೆಯಲ್ಲಿ ಅನುಮಾನಸ್ಪದವಾಗಿ ವಸ್ತುಗಳು ಕಾಣಿಸಿವೆ. ವೈದ್ಯರು ಆಪರೇಷನ್ ಮಾಡಿ ತೆಗೆದಾಗ ತಲೆ ಇಲ್ಲದ 63 ಸ್ಪೂನ್ ಗಳನ್ನ ಹೊಟ್ಟೆಯಲ್ಲಿ ದೊರೆತಿವೆ.
ಆಪರೇಷನ್ ನಂತರ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ತುರ್ತು ನಿಘಾ ಘಟಕದಲಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣದ ಕುರಿತು ಮಾತನಾಡಿದ ಶಸ್ತ್ರಚಿಕಿತ್ಸಕ ಡಾ. ರಾಕೇಶ್ ಖುರಾನಾ, “ಮುಜಾಫರ್ನಗರದ ಬೋಪಾರಾ ಗ್ರಾಮದವರಾದ ವಿಜಯ್ ಚೌಹಾಣ್ ಅವರು 15 ದಿನಗಳ ಹಿಂದೆ ಹೊಟ್ಟೆ ನೋವಿನಿಂದ ನಮ್ಮನ್ನು ಸಂಪರ್ಕಿಸಿದರು. ತಪಾಸಣೆಯ ಸಮಯದಲ್ಲಿ, ನಾವು ಅವರ ಹೊಟ್ಟೆಯಲ್ಲಿ ಹೊರಗಿನ ವಸ್ತುಗಳಿರುವುದು ಪತ್ತೆ ಹಚ್ಚಿದೆವು ಎಂದು ತಿಳಿಸಿದ್ದಾರೆ.
ಭಾನುವಾರ, ನಾವು ಅವನ ಹೊಟ್ಟೆಯಿಂದ 62 ತಲೆಯಿಲ್ಲದ ಚಮಚಗಳನ್ನು ಮತ್ತು ಅವನ ಕರುಳಿನಿಂದ ಒಂದನ್ನು ಚಮಚವನ್ನ ಹೊರತೆಗೆದಿದ್ದೇವೆ. ಎಂದು ಡಾಕ್ಟರ್ ತಿಳಿಸಿದ್ದಾರೆ.
ಡಾ. ಖುರಾನಾ, ಅವರ ಪ್ರಕಾರ ರೋಗಿಯು ಮಾದಕ ವ್ಯಸನಿಯಾಗಿದ್ದು, ಕಳೆದ ಏಳು ತಿಂಗಳಿಂದ ಶಾಮ್ಲಿಯ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ರೋಗಿಗೆ ಪ್ರಜ್ಞೆ ಬಂದ ನಂತರವೇ ಆತನ ಹೊಟ್ಟೆಯಲ್ಲಿ ಚಮಚಗಳು ಹೇಗೆ ಸೇರಿಕೊಂಡಿವೆ ಎನ್ನುವುದು ತಿಳಿಯಲಿದೆ..
Spoons: Doctors Remove 62 Steel Spoons From Man’s Stomach In Muzaffarnagar After Patient Complains Of Severe Pain