ತಪ್ಪು ಮಾಡಿಬಿಟ್ಟಿದ್ದಿಯಾ ಮಗನೇ… ಅಣ್ಣನ ಬಗ್ಗೆ ಆ ರೀತಿ ಮಾತನಾಡಬಾರದಿತ್ತು… ನಿನಗಿದೆ ಮುಂದೆ ಮಾರಿಹಬ್ಬ…!
ಮಹೇಂದ್ರ ಸಿಂಗ್ ಧೋನಿ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಸ್ಥಾನ ಪಡೆದ ಕ್ರಿಕೆಟಿಗ. ಮೈದಾನದ ಒಳಗೆ ಹಾಗೂ ಮೈದಾನದ ಹೊರಗಡೆ ಧೋನಿ ಎಂದೂ ವಿವಾದಕ್ಕೆ ಗುರಿಯಾದವರಲ್ಲ. ಸದಾ ಹಸನ್ಮುಖಿ. ಕೂಲ್ ಆಗಿಯೇ ಭಾರತಕ್ಕೆ ವಿಶ್ವಕಪ್ ಕಿರೀಟ ತೋಡಿಸಿದ್ದ ನಾಯಕ. ಇದೀಗ ಧೋನಿ ಕ್ರಿಕೆಟ್ ಬದುಕಿನ ಮುಸ್ಸಂಜೆಯಲ್ಲಿದ್ದಾರೆ. ಆದ್ರೂ ಧೋನಿ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ.
ಇತ್ತೀಚೆಗೆ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಧೋನಿಯ ಮೇಲೆ ಅಪವಾದ ಮಾಡಿದ್ದರು. 2019ರ ವಿಶ್ವಕಪ್ ನಲ್ಲಿ ಧೋನಿ ಇಂಗ್ಲೆಂಡ್ ವಿರುದ್ಧ ಗೆಲ್ಲುವ ಮನಸ್ಥಿತಿಯನ್ನು ಇಟ್ಟುಕೊಂಡು ಆಡಿರಲಿಲ್ಲ. ಧೋನಿಗೆ ಪಂದ್ಯವನ್ನು ಗೆಲ್ಲಿಸುವ ಸಾಮಥ್ರ್ಯವಿದ್ರೂ ಗೆಲ್ಲಲೇಬೇಕು ಎಂಬ ಉದ್ದೇಶದಲ್ಲಿ ಆಡಿರಲಿಲ್ಲ. ಹೀಗೆ ತನ್ನ ಪುಸ್ತಕದಲ್ಲಿ
ಬರೆದುಕೊಂಡಿದ್ದರು. ಇದಕ್ಕೆ ಪಾಕ್ನ ಕೆಲವು ಮಾಜಿ ಆಟಗಾರರು ಉಪ್ಪು ಖಾರ ಬೆರೆಸಿದ್ದರು. ಆದ್ರೆ ಸಾಮಾಜಿಕ ಜಾಲ ತಾಣದಲ್ಲಿ ಅಭಿಮಾನಿಗಳು ಈ ಹೇಳಿಕೆಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು.
ಇದೀಗ ಅದಕ್ಕೆ ಹೊಸ ಸೇರ್ಪಡೆ ಟೀಮ್ ಇಂಡಿಯಾದ ವೇಗಿ ಶ್ರಿಶಾಂತ್. ಹೇಳಿಕೇಳಿ ಶ್ರೀಶಾಂತ್ ಜಗಳಗಂಟ. ಮೈದಾನದಲ್ಲಿ ಶ್ರೀಶಾಂತ್ ಅವರನ್ನು ಹಿಡಿದಿಟ್ಟುಕೊಳ್ಳುವುದೇ ಒಂದು ಸಾಹಸ. ಅದೂ ಅಲ್ಲದೆ ಶ್ರೀಶಾಂತ್ಗೆ ಧೋನಿಯ ಮೇಲೆ ಸಿಕ್ಕಾಪಟ್ಟೆ ಅಭಿಮಾನವಿದೆ. ಗೌರವವಿದೆ. ಪ್ರೀತಿಯೂ ಇದೆ. ಅಂದ ಮೇಲೆ ಧೋನಿ ಬಗ್ಗೆ ಯಾರಾದ್ರೂ ಟೀಕೆ ಮಾಡಿದ್ರೆ ಶ್ರೀಶಾಂತ್ ಸುಮ್ಮನಿರಲು ಸಾಧ್ಯವೇ ಇಲ್ಲ.
ಬೆನ್ ಸ್ಟೋಕ್ಸ್ ಟೀಕೆಗೆ ಸರಿಯಾಗಿಯೇ ಎದುರೇಟು ಕೊಟ್ಟಿರುವ ಶ್ರೀಶಾಂತ್, ಧೋನಿಯ ಭಾಯ್ ಸಾಮರ್ಥ ಏನು ಅಂತ ನಿನಗೆ ಗೊತ್ತಿದೆಯಾ ಎಂಬ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಭವಿಷ್ಯದಲ್ಲಿ ನೀನು ಎಂದಿಗೂ ಯಾವ ಪಂದ್ಯದಲ್ಲಾದ್ರೂ ಸರಿ ಧೋನಿಯ ವಿರುದ್ಧ ಆಡಬೇಡ. ಯಾಕೆಂದ್ರೆ ಧೋನಿ ಅಷ್ಟು ಸುಲಭವಾಗಿ ಯಾವುದನ್ನು
ಮರೆಯುವವರಲ್ಲ ಅಂತ ಶ್ರೀಶಾಂತ್ ಎಚ್ಚರಿಕೆ ನೀಡಿದ್ದಾರೆ.
ಬೆನ್ ಸ್ಟೋಕ್ಸ್,, ನಾನು ನಿನಗೆ ಇಷ್ಟೇ ಹೇಳುವುದು. ನೀನು ನಾಲ್ಕೈದು ವರ್ಷಗಳಿಂದ ಆಡ್ತಾ ಇದ್ದೀಯಾ. ಆದ್ರೆ ನೀನು ಆಡುತ್ತಿರುವ ಟೈಮ್ ನಲ್ಲಿ ನನಗೆ ಆಡಲು ಆಗಲಿಲ್ಲ. ಆದ್ರೂ ನಿನಗೆ ಬೌಲಿಂಗ್ ಮಾಡುವುದನ್ನು ನಾನು ಎದುರು ನೋಡ್ತಾ ಇದ್ದೀನಿ ಬ್ರದರು.. ಯಾಕಂದ್ರೆ ಧೋನಿಗೆ ನೀನು ಏನು ಹೇಳಿದ್ದೆ ಎಂಬುದಕ್ಕೆ ಉತ್ತರಿಸಲು ಅಷ್ಟೇ ಅಂತ ಶ್ರೀಶಾಂತ್ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ನಾನು ನಿನಗೆ ಒಳ್ಳೆಯದಾಗಲಿ ಅಂತ ಹೇಳುತ್ತೇನೆ. ಯಾಕಂದ್ರೆ ಐಪಿಎಲ್ ಆಗಿರಲಿ, ಭಾರತ ಮತ್ತು ಇಂಗ್ಲೆಂಡ್ ಪಂದ್ಯವಾಗಿರಲಿ..ಧೋನಿಯ ವಿರುದ್ಧ ಆಡಬೇಡ. ಒಂದು ಆಡಿದ್ರೂ ನಿನಗೆ ತಕ್ಕ ಬಹುಮಾನವನ್ನು ಅವರು ನೀಡ್ತಾರೆ. ನಿನ್ನ ಬೌಲಿಂಗ್ ನಲ್ಲಿ ಧೋನಿ ಚೆಂಡನ್ನು ಮೂಲೆ ಮೂಲೆಗೂ ತಲುಪಿಸುತ್ತಾರೆ. ನೀನು ವಿಶ್ವದ ಶ್ರೇಷ್ಠ ಆಲ್ ರೌಂಡರ್ ಆಗಿದ್ದಿರಬಹುದು. ಆದ್ರೆ ಧೋನಿಯನ್ನು ಔಟ್ ಮಾಡಲು ನಿನ್ನಿಂದ ಸಾಧ್ಯವಿಲ್ಲ. ನಿನ್ನ ಕ್ರಿಕೆಟ್ ಬದುಕನ್ನು ಧೋನಿ ಭಾಯ್ ಮುಗಿಸ್ತಾರೆ ಅಂತ ಬೆನ್ ಸ್ಟೋಕ್ಸ್ಗೆ ಶ್ರೀಶಾಂತ್ ಖಡಕ್ ಆಗಿಯೇ ವಾರ್ನಿಂಗ್ ನೀಡಿದ್ದಾರೆ.








