SRH Vs PBKS – ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡಿದೆ. ಆದ್ರೆ ಸ್ವಯಂಕೃತ ಅಪರಾಧದಿಂದಾಗಿ ಪ್ಲೇ ಆಫ್ಸ್ ರೇಸ್ ನಿಂದ ಹೊರಬಿದ್ದಿದೆ. ಈ ಆವೃತ್ತಿಯಲ್ಲಿ ಸೋಲು ಗೆಲುವಿನ ಹಾದಿಯಲ್ಲಿ ಸಾಗಿರುವ ಪಂಜಾಬ್ ಕಿಂಗ್ಸ್ ತಂಡ ಇಂದು ತನ್ನ ಕೊನೆಯ ಪಂದ್ಯವನ್ನಾಡಲಿದೆ. ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಏಳು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ 70 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಗುದ್ದಾಡುತ್ತಿವೆ. ಕಳೆದ ಬಾರಿ ಸೆಣಸಿದ್ದಾಗ ಹೈದದಾಬಾದ್ ತಂಡ ಏಳು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಈ ಪಂದ್ಯ ಎರಡೂ ತಂಡಗಳಿಗೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮ್ಯಾಚ್ ಆಗಿದೆ. ಈ ಪಂದ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಯಾಕಂದರೇ ಈಗಾಗಲೇ ಪ್ಲೇ ಆಫ್ಸ್ ಬಾಗಿಲು ಮುಚ್ಚಿರುವ ಕಾರಣ ಹೊಸ ಮುಖಗಳಿಗೆ ಚಾನ್ಸ್ ನೀಡುವ ಸಾಧ್ಯತೆಗಳಿವೆ.
ಆದ್ರೂ ಕೊನೆಯ ಪಂದ್ಯದಲ್ಲಿ ಗೆದ್ದು, ಟೂರ್ನಿಯನ್ನು ಮುಗಿಸುವ ಪ್ಲಾನ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಇರಬಹುದು. ತಂಡದಲ್ಲಿ ಆರಂಭಿಕರಾಗಿ ಜಾನಿ ಬೇರ್ ಸ್ಟೋವ್ ಕಣಕ್ಕಿಳಿಯುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಶಿಖರ್ ಧವನ್ ಮತ್ತು ಜಾನಿ ಬೇರ್ ಸ್ಟೋವ್ ಉತ್ತಮ ಆರಂಭ ನೀಡಿದ್ರೆ ತಂಡಕ್ಕೆ ಹೆಚ್ಚು ಚಿಂತೆ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಭಾನುಕಾ ರಾಜಪಕ್ಷೆ, ಲಿಯಾಮ್ ಲಿವಿಂಗ್ ಸ್ಟೋನ್ ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ನಾಯಕ ಮಯಾಂಕ್ ಅಗರ್ ವಾಲ್, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇವರೊಂದಿಗೆ ಆಲ್ ರೌಂಡರ್ ರಿಶಿ ಧವನ್ ಕೂಡ ಸಾಥ್ ನೀಡಲಿದ್ದಾರೆ. ರಿಶಿ ಧವನ್ ಅವರು ಬೌಲಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇನ್ನೊಂದೆಡೆ ಕಾಗಿಸೊ ರಬಾಡ ಲಯ ಕಂಡುಕೊಂಡಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಹಾಗೇ ಹಪ್ರಿತ್ ಬ್ರಾರ್ ಮತ್ತು ರಾಹುಲ್ ಚಾಹರ್ ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬೇಕಿದೆ. ವೇಗಿ ಆರ್ಶಾದೀಪ್ ಸಿಂಗ್ ಲಯಬದ್ಧವಾಗಿ ಬೌಲಿಂಗ್ ಮಾಡುತ್ತಿರುವುದು ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಜಾನಿ ಬೇರ್ ಸ್ಟೋವ್
ಶಿಖರ್ ಧವನ್
ಭಾನುಕಾ ರಾಜಪಕ್ಷೆ
ಮಯಾಂಕ್ ಅಗರ್ ವಾಲ್ (ನಾಯಕ)
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ಲಿಯಾಮ್ ಲಿವಿಂಗ್ ಸ್ಟೋನ್
ರಿಶಿ ಧವನ್
ಕಾಗಿಸೊ ರಬಾಡ
ರಾಹುಲ್ ಚಾಹರ್
ಹಪ್ರೀತ್ ಬ್ರಾರ್
ಆರ್ಶಾದೀಪ್ ಸಿಂಗ್ srh-vs-pbks-Punjab Kings Probable Playing XIs