ಕಾಶ್ಮೀರದ ಬುಲೆಟ್ ಎಕ್ಸ್ ಪ್ರೆಸ್ ಉಮ್ರಾನ್ ಮಲಿಕ್
ಯುಎಸಿನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಭಾರತದ ಶರವೇಗದ ಬೌಲರ್ ನ ಉದಯವಾಗಿದೆ. ಬರೋಬ್ಬರಿ 153 ಕಿಲೋ ಮೀಟರ್ ವೇಗದಲ್ಲಿ ಬಾಲ್ ಎಸೆಯುವ ಮೂಲಕ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ ಅತೀ ವೇಗದ ಬಾಲ್ ಎಸೆದ ಬೌಲರ್ ಎಂಬ ಹೆಗ್ಗಳಿಕೆಗೆ ಉಮ್ರಾನ್ ಮಲಿಕ್ ಪಾತ್ರರಾಗಿದ್ದಾರೆ.
ಹೌದು..! ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸ್ ಹೈದರಾಬಾದ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ವೈಫಲ್ಯ ಅನುಭವಿಸಿ, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದ್ರೆ ಉಮ್ರಾನ್ ಮಲಿಕ್ ವಿಚಾರವಾಗಿ ಎಸ್ ಆರ್ ಹೆಚ್ ಟಾಪ್ ನಲ್ಲಿದೆ. ಯಾಕಂದರೇ ಎಸ್ ಆರ್ ಹೆಚ್ ನ ಮಲಿಕ್, ಎಲ್ಲರ ಹುಬ್ಬೇರುವಂತೆ ಬೌಲಿಂಗ್ ಮಾಡುತ್ತಿದ್ದಾರೆ. ಬರೋಬ್ಬರು 150ಕ್ಕೂ ಹೆಚ್ಚು ಸ್ಪೀಡ್ ನಲ್ಲಿ ಬಾಲ್ ಎಸೆಯುತ್ತಿದ್ದಾರೆ.
ಆ ಮೂಲಕ ಎದುರಾಳಿ ಬ್ಯಾಟ್ಸ್ ಮೆನ್ ಗಳ ಎದೆ ಝಲ್ ಎನ್ನುವಂತೆ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 151.03 ವೇಗದಲ್ಲಿ ಬೌಲಿಂಗ್ ಮಾಡಿದ್ದ ಮಲಿಕ್, ನಿನ್ನೆ ನಡೆದ ಆರ್ ಸಿಬಿ ವಿರುದ್ಧದ ಮ್ಯಾಚ್ ನಲ್ಲಿ ಬರೋಬ್ಬರಿ 153 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಇದು ಐಪಿಎಲ್ ನ ಫಾಸ್ಟೆಸ್ಟ್ ಬಾಲ್ ಆಗಿದೆ.