ಕರ್ನಾಟಕ ರಾಜ್ಯವು ಧಾರ್ಮಿಕ ಸಂಸ್ಕøತಿಗೆ ಹೆಸರುವಾಸಿಯಾದ ರಾಜ್ಯ. ಇಲ್ಲಿ ಅನೇಕ ಗುಡಿಗೋಪುರಗಳಿವೆ. ಈ ಗುಡಿಗೋಪುರಗಳು ರಾಜ್ಯದ ಇತಿಹಾಸವನ್ನು ಸಾರುತ್ತವೆ.ಇದಕ್ಕೆ ಮಂಡ್ಯ ಜಿಲ್ಲೆಯು ಹೊರತಾಗಿಲ್ಲ. ಇಲ್ಲಿ ಅನೇಕ ದೇವಾಲಯವಿದ್ದು, ಮಂಡ್ಯ ತಾಲ್ಲೂಕು ಸಾತನೂರು ಗ್ರಾಮದ ಶ್ರೀಕಂಬದನರಸಿಂಹಸ್ವಾಮಿ ದೇವಾಲಯವು ಇದಕ್ಕೆ ಸಾಕ್ಷಿಯಾಗಿದೆ, ವಿಜಯನಗರದ ಅರಸರ ಕಾಲದಲ್ಲಿ ಪಾಳೇಗಾರರಾಗಿದ್ದ ಗಂಗಯ್ಯ ದಂಡನಾಯಕ ಬಸವರಸ ಮತ್ತು ಕುಂಪದ ನಾಯಕರ ಮೈದನಾಗಿದ್ದ ವೀರಸಂಕರಸನ ಕೋರಿಕೆಯ ಮೇರೆಗೆ ಸಿಂಗಣ್ಣಯ್ಯನು ಕಂಬದ ತಿರುಮಲಸ್ವಾಮಿ ರಥೋತ್ಸವಕ್ಕೆ ಭೂಮಿಯನ್ನು ಬಿಟ್ಟ ಸಂಗತಿ ಇಲ್ಲಿನ ಶಾಸನದಿಂದ ತಿಳಿಯುತ್ತದೆ. ಮುಂದುವರೆದು ಬಹುದಾನ್ಯ ಸಂವತ್ಸರದ ಬಾದ್ರಪದ ಶುಕ್ಲ ಪಂಚಮಿಯಂದು ಸುಮಾರು 15ನೇ ಶತಮಾನದಲ್ಲಿ ಈ ದೇವಸ್ಥಾನವು ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಶಾಸನ ತಿಳಿಸುತ್ತದೆ.
ಈ ದೇವಾಲಯದ ಸ್ಥಳ ಪುರಾಣದಂತೆ ಇಲ್ಲಿ ಶ್ರೀಮಾಂಡವ್ಯ ಋಷಿಗಳು ತಪಸ್ಸು ಮಾಡಿ ಈ ದೇವಾಲಯ ಇರುವ ಕಡೆ ಸ್ವಾಮಿಯನ್ನು ಆಹ್ವಾನಿಸಿ ಜನರ ಕಷ್ಟ ಸುಖಗಳಿಗೆ ನೀನು ಭಾಗಿಯಾಗು ಎಂದು ಸ್ವಾಮಿಯನ್ನು ಪ್ರತಿಷ್ಟಾಪಿಸಿದರು ಎಂದು ಸ್ಥಳ ಪುರಾಣ ಹೇಳುತ್ತದೆ.
ಈ ದೇವಾಲಯವು ಸುಮಾರು 70 ರಿಂದ 75 ಮೆಟ್ಟಿಲುಗಳ ಮೇಲೆ ಇರುವ ಸುಂದರ ತಾಣವಾಗಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಸ್ವಾಮಿಯು ತಾನು ಕಲ್ಲಿನ ರೂಪದಲ್ಲಿದ್ದು ಭಕ್ತಾದಿಗಳನ್ನು ಸಂರಕ್ಷಿಸುತ್ತೇನೆ ಎಂಬುದನ್ನು ಪ್ರಚಾರಪಡಿಸುತ್ತದೆ. ದೇವಾಲಯ ಇರುವ ಬೆಟ್ಟದ ಮೇಲೆ ಹಿಂದೆ ಗವಿ ಇದ್ದದ್ದು, ಇದು ಋಷಿ ಮುನಿಗಳಿಗೆ ಆಶ್ರಯ ತಾಣವಾಗಿತ್ತು ಎಂಬುದನ್ನು ತಿಳಿಸುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರೀಕಂಬದನರಸಿಂಹಸ್ವಾಮಿಗೆ ಸಾತನೂರು, ಚಿಕ್ಕಮಂಡ್ಯ, ಗೋಪಾಲಪುರ, ಕೋಮ್ಮೇರಹಳ್ಳಿ, ಹೊನ್ನಗಾನಹಳ್ಳಿ, ಉಮ್ಮಡಹಳ್ಳಿ,ಹುಲಿವಾನ ಈ ರೀತಿ ಅನೇಕ ಗ್ರಾಮದ ಭಕ್ತಾದಿಗಳು ಭಕ್ತರಾಗಿರುತ್ತಾರೆ. ಈ ದೇವಾಲಯಕ್ಕೆ ಸರ್ಕಾರ ಮತ್ತು ಗ್ರಾಮಸ್ಥರ ನೆರವಿನಿಂದ ನಿತ್ಯಪೂಜೆ, ಕೈಂಕರ್ಯನಡೆಯುತ್ತಿದೆ. ಇದೇ ರೀತಿ ಸರ್ಕಾರ ಮತ್ತು ಗ್ರಾಮಸ್ಥರು ಉತ್ತಮ ರೀತಿಯಲ್ಲಿ ನೆರವನ್ನು ನೀಡಿದಲ್ಲಿ. ಇನ್ನು ದೇವಾಲಯದ ಪ್ರಗತಿ ಮತ್ತು ಉನ್ನತಿಗೆ ಸಾಧ್ಯವಾಗುತ್ತದೆ ಎಂದು ಈ ದೇವಾಲಯದ ಅರ್ಚಕರು ಹೇಳುತ್ತಾರೆ.
ಬಾಗಿಲು ತೆರೆಯುವ ಸಮಯ:
07:30 AM IST – 12:30 PM IST
05:30 PM IST – 09:30 PM IST
ಬಾಗಿಲು ಮುಚ್ಚುವ ಸಮಯ:
09:30 PM IST – 09:30 PM IST
ಸರ್ವ ದರ್ಶನ