ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀ ಕುಮಾರಸ್ವಾಮಿ ದೇವಸ್ಥಾನವು ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಇದು ಕುಮಾರಸ್ವಾಮಿ, ಸುಬ್ರಹ್ಮಣ್ಯ ಅಥವಾ ಮುರುಗನ್ ಎಂದು ಕರೆಯಲ್ಪಡುವ ಕಾರ್ತಿಕೇಯ ದೇವರಿಗೆ ಸಮರ್ಪಿತವಾಗಿದೆ.
ಬೆಂಗಳೂರಿನ ಹೆಸರಾಂತ ನಾಡ ಪ್ರಭುಗಳಾದ ದಿ!! ಶ್ರೀ ಕೆಂಪೇಗೌಡರು ನಾಲ್ಕುನೂರು ವರ್ಷಗಳ ಹಿಂದೆಯೇ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಗೊಂಡಾರಣ್ಯ ಗುಡ್ಡದ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆಂದು ಪ್ರತೀತಿ ಇದೆ.
1901ರಲ್ಲಿ ಮುಖ್ಯನ್ಯಾಯಾಧೀಶರಾದ ಶ್ರೀ ಟಿ. ನರಹರಿರಾಯರು ಮುಂಭಾಗದ ಮಂಟಪವನ್ನು ಮತ್ತು ಗೋಪುರವೊಂದನ್ನು ನಿರ್ಮಿಸಿರುತ್ತಾರೆ. ಇದಕ್ಕೆ ನರಹರಿರಾಯರ ಗುಡ್ಡವೆಂದು ಕರೆಯಲಾಗುತ್ತಿತ್ತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಮೈಸೂರಿನ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಸ್ಥಾನ ವಿದ್ವಾಂಸರಾದ ಮಹಾಮಹೋಧ್ಯಯ ವಿದ್ಯಾನಿಧಿ ಸಿದ್ದಾಂತಿ ಶ್ರೀ ಎಸ್. ಶಿವಶಂಕರ ಶಾಸ್ತ್ರೀಗಳು 1924ರಲ್ಲಿ ಸಾಲಿಗ್ರಾಮ ಶಿಲೆಯ ಶ್ರೀ ಪಂಚಮುಖಿ ಗಣಪತಿ (ಸಿಂಹಾರೂಢ ಪಂಚಾಸ್ಯ ವಕ್ರತುಂಡ ಮೂರ್ತಿ) ಮತ್ತು ಉಮಾ ಮಹೇಶ್ವರ-ಗಂಗಾ-ಗಾಯಿತ್ರಿ-ನವಶಕ್ತಿ ಸ್ವರೂಪವಾದ ತಾಮ್ರದ ಫಲಕವನ್ನು ಷಟ್ ಕೋಣದಲ್ಲಿ ಸ್ಥಾಪಿಸಿ ಕಾವಡಿಗಳು ಪ್ರಾರಂಭವಾಯಿತು.
1954ರಲ್ಲಿ ಶ್ರೀ ಶಿವಶಂಕರ ಶಾಸ್ತ್ರಿಗಳ ಮಕ್ಕಳಾದ ವೇII ಬ್ರII ಶ್ರೀ ಸಿದ್ದಾಂತಿ ಸುಬ್ರಮಣ್ಯ ಶಾಸ್ತ್ರಿಗಳಿಂದ ನವಾಂಶ ಸಂಭೂತನಾದ ನವಲೋಹದಿಂದ ಕೂಡಿದ ಶ್ರೀ ಕುಮಾರಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ದೈವ ಭಕ್ತರಾದ ಶ್ರೀಮತಿ ಪದ್ಮಮ್ಮ ಎಂಬುವವರು 1975ರಲ್ಲಿ ಶ್ರೀ ಉದ್ಬವ ಆದಿಶೇಷ ಸನ್ನಿಧಿಗೆ ಸಂಪೂರ್ಣ ಆಲಯವನ್ನು ಕಟ್ಟಿಸಿದ್ದು. 1991ರಲ್ಲಿ ವಿಮಾನ ಗೋಪುರವನ್ನು ನಿರ್ಮಿಸಲಾಯಿತು. ನಂತರ 2006ರಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಭಕ್ತಾಧಿಗಳಿಂದ ಹಾಗೂ ಇಲಾಖಾ ವತಿಯಿಂದ 108 ಅಡಿ ರಾಜಗೋಪುರದ ನಿರ್ಮಾಣಗೊಂಡ ಕುಂಭಾಭಿಷೇಕವನ್ನು ನಡೆಸಲಾಯಿತು.
ಅನಂತರ ಶಿಥಿಲಗೊಂಡಿದ್ದ ದೇವಸ್ಥಾನವನ್ನು ಇಲಾಖಾ ಮತ್ತು ವ್ಯವಸ್ಥಾಪನಾ ಸಮಿತಿಯ ವತಿಯಿಂದ ದಿನಾಂಕ:18-06-2009ರಲ್ಲಿ ಸಂಪೂರ್ಣ ಜೀರ್ಣೋದ್ಧಾರ ಗೊಳಿಸಲಾಯಿತು.
ದೇವಾಲಯದಲ್ಲಿ ವಾರ್ಷಿಕ ಆಡಿಕೃತಿಕೆ, ತಿರುಪ್ಪಡಿ ಉತ್ಸವ, ಕಾರ್ತಿಕ ದೀಪೋತ್ಸವ, ಶಿವರಾತ್ರಿ, ನವರಾತ್ರಿ, ಸಂಕಷ್ಟಹರ ಚತುರ್ಥಿ, ಷಷ್ಠಿ ಪೂಜಾಧಿಗಳು ಪ್ರಮುಖವಾಗಿ ನಡೆಯುತ್ತಿದ್ದು ಭಕ್ತಾಧಿಗಳಿಗೆ ಅಭೀಷ್ಠದಾಯಕವಾಗಿರುತ್ತದೆ.
ಬಾಗಿಲು ತೆರೆಯುವ ಸಮಯ:
07:00 AM IST – 12:30 PM IST
05:30 AM IST – 08:30 AM IST
ಬಾಗಿಲು ಮುಚ್ಚುವ ಸಮಯ
08:30 PM IST – 07:00 AM IST
ಸಾಮಾನ್ಯ ದರ್ಶನ