ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಬಳೇಪೇಟೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು 250 ವರ್ಷಗಳ ಪುರಾತನ ಪ್ರಸಿದ್ಧಿ ಹೊಂದಿದ ದೇವಾಲಯವಾಗಿರುತ್ತದೆ. ದೇವಾಲಯ ಅಕ್ಕಪಕ್ಕ ಭಾಗದಲ್ಲಿ ಹೂ ಮಾರುವವರು ಹೆಚ್ಚಾಗಿ ವಾಸಿಸುತ್ತಿದ್ದು, ಆ ಜನಾಂಗದವರಿಗೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ಮನೆಯ ದೇವರು ಆಗಿರುತ್ತದೆ. ಆ ಜನಾಂಗದ ಮುಖಂಡರಾದ ಶ್ರೀ ಘೋರಿ ನರಸಿಂಹಯ್ಯ ಎಂಬುವವರಿಗೆ ಹಿಂದೆ ಸ್ಪಪ್ನದಲ್ಲಿ ಕಾಣಿಸಿಕೊಂಡು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವಂತಹ ಬನ್ನೇರುಘಟ್ಟದಲ್ಲಿರುವ ಸುವರ್ಣಮುಖಿ ಕೊಳದಲ್ಲಿ ಇರುವುದಾಗಿ ಗೋಚರಿಸಿತು. ಆಗ ಜನಾಂಗದವರೆಲ್ಲರೂ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಹೋಗಿ ನೋಡಿದಾಗ ಅಲ್ಲಿ ಅವರಿಗೆ ಆಶ್ಚರ್ಯವಾಗಿ ಒಂದೇ ರೀತಿಯ ಎರಡು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಅವಳಿ-ಜವಳಿ ವಿಗ್ರಹಗಳು ಕಾಣಿಸಿಕೊಂಡು, ಒಂದು ವಿಗ್ರಹವನ್ನು ಬನ್ನೇರುಘಟ್ಟದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿ ಮತ್ತೊಂದು ವಿಗ್ರಹವನ್ನು ತೆಗೆದುಕೊಂಡು ಬಂದು ಬೆಂಗಳೂರಿನ ಬಳೇಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ತುಂಬಾ ಹಳೆಯದಾದ ದೇವಾಲಯವನ್ನು ಕರ್ನಾಟಕ ಸರ್ಕಾರ ಹಾಗೂ ಭಕ್ತಾಧಿಗಳ ಸಹಾಯದಿಂದ 1992 ರ ವೈಶಾಖ ಮಾಸದಲ್ಲಿ ಜೀರ್ಣೋದ್ಧಾರ ಮಾಡಿ ನೂತನವಾಗಿ ಶ್ರೀ ಕೋದಂಡರಾಮ ಸ್ವಾಮಿ ಸನ್ನಿಧಿ, ಶ್ರೀ ಮಹಾಲಕ್ಷ್ಮಿ ಸನ್ನಿಧಿ, ನೂತನ ಧ್ವಜ ಸ್ಥಂಭ, ವಿಮಾನ ಗೋಪುರಗಳು, ಮುಖ ಮಂಟಪಗಳು, ರಾಜಗೋಪುರ ಮಾಡಲಾಯಿತು. ಅನಂತರ 2015 ರಲ್ಲಿ ಶ್ರೀ ಪಿಳ್ಳಾಂಜನೇಯ ಸ್ವಾಮಿ ದೇವಾಲಯದ ವಿಮಾನ ಗೋಪುರ ಮುಖ ಮಂಟಪ ಜೀರ್ಣೋದ್ಧಾರಗೊಂಡಿರುತ್ತದೆ.
ಈ ದೇವಾಲಯದಲ್ಲಿ ವೈಶಾಖ ಮಾಸ ಶುದ್ಧ ತ್ರಯೋದಶಿ, ಚಥುರ್ದಶಿ, ಪೌರ್ಣಮಿ, ಸ್ವಾತಿ ನಕ್ಷತ್ರ ಮಿಲನದಲ್ಲಿ ಶ್ರೀಯವರ ಬ್ರಹ್ಮರಥೋತ್ಸವ, ತಿರುಪ್ಪಾವಡಿ, ಲಕ್ಷಾರ್ಚನೆ ಸೇವೆಗಳು ಸುಮಾರು ಒಂದು ತಿಂಗಳ ವಿಶೇಷ ಪೂಜೆಗಳು ನಡೆಯುತ್ತದೆ. ಈ ದೇವಾಲಯದಲ್ಲಿ ಭಾದ್ರಪದ ಮಾಸದ ಶ್ರವಣ ನಕ್ಷತ್ರದಲ್ಲಿ ಪವಿತ್ರೋತ್ಸವ ಕಾರ್ಯಕ್ರಮಗಳು ಶ್ರೀ ವೈಖಾನಸಾಗಮೋಕ್ತ ಪ್ರಕಾರವಾಗಿ ಎಲ್ಲಾ ಪೂಜೆ ಪುರಸ್ಕಾರಗಳು ನಡೆಯುತ್ತದೆ. 1994ರಲ್ಲಿ ಈ ದೇವಾಲಯದ ಉತ್ಸವ ಮೂರ್ತಿ ಸನ್ನಿಧಿ (ಆಯನ್ ಮಹಲ್) ಕನ್ನಡಿ ಮಂಟಪ ಜೀರ್ಣೋದ್ಧಾರಗೊಂಡು “ನಿತ್ಯ ಕಲ್ಯಾಣಂ ಪಚ್ಚತೋರಣಂ” ಎಂಬಂತೆ ನಿತ್ಯ ಕಲ್ಯಾಣೋತ್ಸವ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತವೆ.
ಇಲ್ಲಿ ಭಕ್ತಾಧಿಗಳಿಗೆ ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಅಂತಹವರಿಗೆ ಇಲ್ಲಿ ಕಲ್ಯಾಣ ದಾರ (ಕಂಕಣ) ಕಟ್ಟಿಸಿಕೊಂಡರೆ ವಿವಾಹ ಪ್ರಕ್ರಿಯೆ ಸುಲಭವಾಗಿ ಆಗುತ್ತಿರುವುದಾಗಿ ಭಕ್ತರ ನಂಬಿಕೆ ಹಾಗೂ ಕುಜ ದೋಷ, ಚರ್ಮ ದೋಷ ಇರುವವರಿಗೆ ಸಹ ಈ ದೇವರ ಸೇವೆ ಮಾಡಿದರೆ ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ಪಂಚಾಮೃತ ಅಭಿಷೇಕ, ನಿತ್ಯ ಪ್ರಸಾದ ಸೇವೆಗಳು ನಡೆಯುತ್ತದೆ. ಚಂದ್ರಮಾನ ಯುಗಾದಿ, ಶ್ರೀರಾಮನವಮಿ, ರಥ ಸಪ್ತಮಿ, ಶ್ರಾವಣ ಮಾಸ, ನವರಾತ್ರಿ, ಕಾರ್ತೀಕ ಮಾಸ ವಿಷ್ಣು ದೀಪ, ಹನುಮಂತ ಜಯಂತಿ, ಧನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಪ್ರತೀ ತಿಂಗಳು ಸ್ವಾತಿ ನಕ್ಷತ್ರದಂದು ಶ್ರೀ ಸ್ವಾಮಿಯವರಿಗೆ ವಿಶೇಷ ಅಲಂಕಾರ, ಪ್ರಾಕಾರೋತ್ಸವ ಸೇವೆಗಳು ನಡೆಯುತ್ತದೆ
ಬಾಗಿಲು ತೆರೆಯುವ ಸಮಯ
07:00 AM IST – 12:30 PM IST
08:00 PM IST
ಬಾಗಿಲು ಮುಚ್ಚುವ ಸಮಯ
12:30 PM IST – 08:00 PM IST
ದರ್ಶನ