Jadeja | ಶ್ರೀಲಂಕಾ ಟಿ-20 ಸಿರೀಸ್ ಗೆ ರಾಕ್ ಸ್ಟಾರ್ ವಾಪಸ್..!! sri-lanka-t20i all rounder ravindra jadeja re entry
ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲದಿನಗಳಿಂದ ಟೀಂ ಇಂಡಿಯಾದಿಂದ ದೂರ ಇರುವ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಸ್ವದೇಶದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ದದ ಟಿ 20 ಸರಣಿಗೆ ಜಡ್ಡು ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಶ್ರೀಲಂಕಾ ಭಾರತದ ಪ್ರವಾಸದಲ್ಲಿ ಮೂರು ಟಿ 20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನ ಆಡಲಿದೆ.

ಈ ಸರಣಿಯಲ್ಲಿ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗೇ ಗಾಯದಿಂದ ದೂರ ಉಳಿದಿದ್ದ ಸ್ಟಾರ್ ಆಟಗಾರರು ತಂಡ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ ರವೀಂದ್ರ ಜಡೇಜಾ ಅವರು, ಈಗಾಗಲೇ ಲಕ್ನೋವನ್ನು ತಲುಪಿದ್ದು, ಐಸೋಲೇಷನ್ ನಲ್ಲಿದ್ದಾರೆ.
ಕ್ರಿಕೆಟ್ ಬಜ್ ವರದಿಯ ಪ್ರಕಾರ, ಜಡೇಜಾ ಜೊತೆಗೆ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಇದೇ ವೇಳೆ, ಫೆಬ್ರವರಿ 24ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಕೊಹ್ಲಿ ಹೊರಗುಳಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.








