ಆರ್ ಸಿಬಿ ತಂಡ ತೊರೆದ ಲಂಕಾ ಆಟಗಾರರು RCB saaksha tv
ದುಬೈ : 14ನೇ ಆವೃತ್ತಿ ಐಪಿಎಲ್ ನಲ್ಲಿ ಇಂದು ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಆದರೆ ಆರ್ ಸಿಬಿ ಐಪಿಎಲ್ ಬಯೋಬಬಲ್ ನಿಂದ ಶ್ರೀಲಂಕಾದ ಆಲ್ ರೌಂಡರ್ ವನಿಡು ಹಸರಂಗ ಮತ್ತು ವೇಗಿ ಚಮೀರಾ ಅವರನ್ನು ಬಿಡುಗಡೆ ಮಾಡಿದೆ.
ಐಸಿಸಿ ಟಿ-20 ವಿಶ್ವಕಪ್ ನ ಕ್ವಾಲಿಫೈಯರ್ ನಲ್ಲಿ ಪಾಲ್ಗೊಳ್ಳುವುದಕ್ಕೆ ಲಂಕಾ ಆಟಗಾರರಾದ ವನಿಡು ಹಸರಂಗ ಮತ್ತು ದುಷ್ಮಂತ ಚಮೀರಾ ಅವರಿಗೆ ಕರೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡಕ್ಕೆ ಪ್ರಾಮುಖ್ಯತೆ ನೀಡಬೇಕಾಗಿರುವುದರಿಂದ ಹಸರಂಗ ಮತ್ತು ಚಮೀರಾರನ್ನು ಬಿಡುಗಡೆ ಮಾಡಿದೆ.
ಇನ್ನು ಇಂದು ಕ್ವಾಲಿಫೈಯರ್ ಆಡುತ್ತಿರುವ ಆರ್ ಸಿಬಿಗೆ ಈ ಇಬ್ಬರು ಆಟಗಾರರು ಹೊರ ಹೋಗುತ್ತಿರುವುದು ಯಾವುದೇ ಹೊಡೆತ ನೀಡುವುದಿಲ್ಲ.
ಯಾಕೆಂದರೇ 14 ನೇ ಆವೃತ್ತಿಯಲ್ಲಿ ಆರ್ ಸಿಬಿಗೆ ಬದಲಿ ಆಟಗಾರರಾಗಿ ಬಂದ ಹಸರಂಗ ಮತ್ತು ದುಷ್ಮಂತ ಚಮೀರಾ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯದೇ ಬೆಂಚ್ ಕಾದದ್ದೇ ಹೆಚ್ಚು. ಹೀಗಾಗಿ ಈ ಇಬ್ಬರ ನಿರ್ಗಮನದಿಂದ ತಂಡಕ್ಕೆ ಯಾವುದೆ ಹೊಡೆತ ಬೀಳುವುದಿಲ್ಲ.
ಇನ್ನು ವನಿಡು ಹಸರಂಗ ಮತ್ತು ದುಷ್ಮಂತ ಚಮೀರಾ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ಶ್ರೀಲಂಕಾ ತಂಡವನ್ನು ಸೇರಿಕೊಳ್ಳಲಿದ್ದಾರೆ.