ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ,ಘಾಟಿ, ಇತಿಹಾಸ ಮತ್ತು ಮಹಿಮೆ

Sri Subrahmanya Swamy Temple, Ghat, History and Glory

Shwetha by Shwetha
February 27, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯವು 15ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸರಿಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಪೂರ್ವದಲ್ಲಿ ವಿಳೇದೆಲೆ ಮಾರುವ ವರ್ತಕನು ಪಟ್ಟಣಕ್ಕೆ ವಿಳೇದೆಲೆಯನ್ನು ಮಾರಲು ಹೋಗುವ ದಾರಿ ಮಧ್ಯದಲ್ಲಿ, ಪ್ರತಿದಿನವೂ ಈ ಪುಣ್ಯಸ್ಥಳದಲ್ಲಿ (ಘಾಟಿ ಸುಬ್ರಹ್ಮಣ್ಯ) ವಿಶ್ರಮಿಸಿಕೊಂಡು ಹೊರಡುತ್ತಿದ್ದನು. ಒಂದು ದಿನ ಇದೇ ರೀತಿ ದಾರಿ ಮಧ್ಯದಲ್ಲಿ ಈ ಸ್ಥಳದಲ್ಲಿ ವಿಶ್ರಮಿಸುವಾಗ ಅವನ ಸ್ವಪ್ನದಲ್ಲಿ ಶ್ರೀ ಸ್ವಾಮಿಯವರು ಬಂದು ಈ ಸ್ಥಳದಲ್ಲಿ ಸರ್ಪ ರೂಪದಲ್ಲಿ ಶಿವನ ಸುತನಾದ ನಾನು ಹಾಗು ಅದೇ ಶಿಲೆಯಲ್ಲೆ ಲಕ್ಷ್ಮಿ ಸಹಿತವಾಗಿ ಶ್ರೀ ನೃಸಿಂಹಸ್ವಾಮಿಯು ಯುಗಾಂತರದಲ್ಲಿ ಮಾರ್ಕಾಂಡೇಯ ಮಹರ್ಷಿಗಳಿಗೆ ನಾನು ಕೊಟ್ಟ ವರಪ್ರಧಾನದಿಂದ, ಷೋಡೋಶಕಲಾಸಂಭೂತನಾಗಿ ಉದ್ಭವವಾಗಿದ್ದು, ನನ್ನ ಭಕ್ತನಾದಂತಹ ಸೊಂಡೂರು ಮಹಾರಾಜರಿಗೆ ಈ ವಿಷಯವನ್ನು ತಿಳಿಸಿ, ಗುಡಿ ಗೋಪುರಾಧಿಗಳನ್ನು ಕಟ್ಟಿಸಿ, ಪೂಜಾ ಕೈಕಂರ್ಯಗಳಿಗೆ ವ್ಯವಸ್ಥೆಯನ್ನು ಮಾಡಿಸಲು ನನ್ನ ಆಜ್ಞೆಯಾಗಿದೆ ಎಂದು ತಿಳಿಸು, ನೀನು ಸ್ವಪ್ನದಿಂದ ಜಾಗ್ರತನಾದಂತಹ ಸಮಯಕ್ಕೆ ಇದೇ ದಾರಿಯಲ್ಲೇ ಒಬ್ಬ ಬ್ರಾಹ್ಮಣನು ನಿನ್ನ ಎದುರಿಗೆ ಬರುವನು, ಅವನಿಗೆ ಈ ಸ್ವಪ್ನ ವೃತ್ತಾಂತವನ್ನು ತಿಳಿಸಿ, ಆ ಬ್ರಾಹ್ಮಣ ಸಹಿತನಾಗಿ ಕೂಡಲೇ ನೀನು ಸೊಂಡೂರು ರಾಜನ ದರ್ಶನಾರ್ಥಿಯಾಗಿ ಪ್ರಯಾಣಿಸು ಎಂದು ಶ್ರೀ ಸ್ವಾಮಿಯು ಸ್ವಪ್ನದಲ್ಲಿ ತಿಳಿಸಿ ಅಂತರ್ಧಾನನಾದನು.

ವಿಳೇದೆಲೆ ಮಾರುವ ವರ್ತಕನು ನಿದ್ರೆಯಿಂದ ಜಾಗ್ರತನಾಗಿ ನೋಡಿದರೆ ಅದೇ ಸ್ಥಳದಲ್ಲಿ ಒಬ್ಬ ಬ್ರಾಹ್ಮಣನ ದರ್ಶನವಾಗಿ, ಈ ಸ್ವಪ್ನ ವೃತ್ತಾಂತವನ್ನೆಲ್ಲ ಬ್ರಾಹ್ಮಣನಿಗೆ ತಿಳಿಸಲು, ಬ್ರಾಹ್ಮಣ ಮತ್ತು ವರ್ತಕರು ಸೊಂಡೂರು ಕಡೆ ಪ್ರಯಾಣವನ್ನು ಬೆಳೆಸಿದರು. ಸುಮಾರು 2-3 ದಿನಗಳ ನಂತರ ಸೊಂಡೂರು ಮಹಾರಾಜರ ದರ್ಶನವನ್ನು ಪಡೆದು, ನಡೆದ ಸ್ವಪ್ನ ವೃತ್ತಾಂತವನ್ನೆಲ್ಲ ಮಹಾರಾಜರಿಗೆ ತಿಳಿಸಲು, ಮಹಾರಾಜರು (ಈ ಬ್ರಾಹ್ಮಣ ಮತ್ತು ವರ್ತಕರು ಧನಾರ್ಥಿಗಳಾಗಿ ಈ ರೀತಿ ಸ್ವಪ್ನ ವೃತ್ತಾಂತವನ್ನು ಸುಳ್ಳು ಹೇಳುತ್ತಿರುವವರೆಂದು ಭಾವಿಸಿ) ಒಮ್ಮೆ ಮುಗಳ್ನಗುತ್ತಾ, ಈ ಬ್ರಾಹ್ಮಣ ಮತ್ತು ವರ್ತಕರಿಗೆ ವಸ್ತ್ರ ತಾಂಬೂಲಗಳನ್ನು ಕೊಟ್ಟು ಕಳುಹಿಸಿ ಎಂದು ಹೇಳಿ ಸಭೆಯಿಂದ ಹೊರಟುಹೋದನು. ಆ ದಿನ ರಾತ್ರಿ ಮಹಾರಾಜರಿಗೆ ಕುಮಾರಸ್ವಾಮಿಯು ಸ್ವಪ್ನದಲ್ಲಿ ಬಂದು, ಆ ಬ್ರಾಹ್ಮಣ ಮತ್ತು ವರ್ತಕರು ಹೇಳುತ್ತಿರುವುದು ನಿಜವೆಂದೂ, ನೀನು ಆ ಪುಣ್ಯಕ್ಷೇತ್ರಕ್ಕೆ ಬ್ರಾಹ್ಮಣ ಮತ್ತು ವರ್ತಕರ ಸಹಿತವಾಗಿ ಹೋಗಿ ಸ್ಥಳವನ್ನು ಉತ್ಕನನ ಮಾಡಿ, ಗುಡಿ ಗೋಪುರಾಧಿಗಳನ್ನು ಕಟ್ಟಿಸಿ, ಪೂಜಾ ಕೈಂಕರ್ಯಗಳಿಗೆ ಬೇಕಾಗುವ ವ್ಯವಸ್ಥೆಯನ್ನು ಮಾಡಿ, ನನ್ನ ಅನುಗ್ರಹಕ್ಕೆ ಪಾತ್ರನಾಗು ಎಂದು ಹೇಳಿ ಅಂತರ್ಧಾನನಾದನು.

Related posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

May 3, 2026
ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

May 3, 2026

ಮರುದಿನ ಪ್ರಾತಃಕಾಲ ರಾಜ ಸಭೆಯಲ್ಲಿ ಮಹಾರಾಜರು ತನ್ನ ಕುಲಗುರುಗಳಿಗೆ ಹಾಗು ಮಂತ್ರಿಗಳಿಗೆ ನಿನ್ನೆ ನಡೆದಂತಹ ಘಟನೆ ಹಾಗು ಸ್ವಪ್ನ ವೃತ್ತಾಂತವನ್ನು ತಿಳಿಸಿ, ಆ ಬ್ರಾಹ್ಮಣ, ವರ್ತಕ, ರಾಜಗುರು ಹಾಗು ಮಂತ್ರಿಗಳ ಸಹಿತವಾಗಿ ಈ ಕ್ಷೇತ್ರಕ್ಕೆ ಬಂದು, ಸ್ಥಳವನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರವಾಗಿ ಪರಿಶೀಲಿಸುತ್ತಿದ್ದಾಗ, ಅದೇ ಸಂದರ್ಭದಲ್ಲಿ ಕ್ಷೀರಸಾಗರಪುರದ (ಈಗಿನ ಪಾಲ್‌ಪಾಲ್‌ ದಿನ್ನೆ ಗ್ರಾಮ) ಗೋಪಾಲಕರು ತಮ್ಮ ಗೋವುಗಳನ್ನು ಈ ಅರಣ್ಯಕ್ಕೆ ಮೇಯಿಸಲು ಬಂದಿದ್ದರು. ಅದರಲ್ಲಿ ಒಬ್ಬ ಗೋಪಾಲಕನು ಮಹಾರಾಜರಿಗೆ ಈ ರೀತಿ ತಿಳಿಸುತ್ತಾನೆ, ಏನೆಂದರೆ ನಮ್ಮಲ್ಲಿರುವ ಒಂದು ಗೋವು ಪ್ರತಿನಿತ್ಯವೂ ಸಾಯಂಕಾಲ ನಾವು ಹಿಂದಿರುಗುವುದಕ್ಕೂ ಮುಂಚೆ ಈ ಸ್ಥಳದಲ್ಲಿರುವ (ಶ್ರೀಸ್ವಾಮಿಯವರು ಉದ್ಭವವಾಗಿರುವ ಸ್ಥಳ) ವಲ್ಮೀಕದ ಮೇಲೆ ಧಾರಾಕಾರವಾಗಿ ಹಾಲನ್ನು ಬಿಡುತ್ತಿರುವ ವಿಷಯವನ್ನು ತಿಳಿಸಲು, ಸಂತುಷ್ಟನಾದಂತಹ ಮಹಾರಾಜರು ಆ ದಿನ ಸಾಯಂಕಾಲಕ್ಕೆ ಎದುರುನೋಡುತ್ತಾ ಸ್ವಾಮಿಯವರ ಸ್ಮರಣೆಯನ್ನು ಮಾಡುತ್ತಾ ಕಾಲಕಳೆಯುತ್ತಿರುವಾಗಲೇ, ಆ ಸಾಯಂಕಾಲ ಪುಣ್ಯ ಗೋವು ವಲ್ಮೀಕವಿರುವ ಸ್ಥಳಕ್ಕೆ ಬಂದು ಕೆಚ್ಚಲುಗಳಿಂದ ತನ್ನಷ್ಟಕ್ಕೆ ತಾನೇ ಹಾಲನ್ನು ಬಿಡುವುದನ್ನು ಕಂಡು ಸಂತುಷ್ಟರಾಗಿ, ಆ ಸ್ಥಳವನ್ನು ಪುಣ್ಯಮುಹೂರ್ತದಲ್ಲಿ ಉತ್ಕನನವನ್ನು ಮಾಡಿಸಿದಾಗ ಏಕಶಿಲಾಮೂರ್ತಿಯಾಗಿರುವಂತಹ (ಪೂರ್ವಾಭಿಮುಖವಾಗಿ ಸರ್ಪ ರೂಪದಲ್ಲಿರುವಂತಹ ಶ್ರೀಸುಬ್ರಹ್ಮಣ್ಯ ಸ್ವಾಮಿ ಹಾಗು ಪಶ್ಚಿಮಾಭಿಮುಖವಾಗಿ ಲಕ್ಷ್ಮೀ ಸಹಿತವಾಗಿ ಶ್ರೀ ನೃಸಿಂಹಸ್ವಾಮಿ) ಯವರನ್ನು ಕಂಡು ಸ್ತುತಿಸಿ ಆಸ್ಥಾನ ವಿಧ್ವಾಂಸರೊಂದಿಗೆ ಹಾಗೂ ಆ ಬ್ರಾಹ್ಮಣನೊಂದಿಗೆ ಚರ್ಚಿಸಿ, ಒಳ್ಳೆಯ ಲಗ್ನವನ್ನು ನಿಶ್ಚಯಿಸಿ ಗರ್ಭಗುಡಿ, ಸುಕನಾಸಿ ಮತ್ತು ನವರಂಗವನ್ನು ನಿರ್ಮಿಸಿ, ಪ್ರತಿನಿತ್ಯವೂ ತ್ರಿಕಾಲ ಪೂಜೆಯನ್ನು ಮಾಡಲು ಆ ಬ್ರಾಹ್ಮಣನಿಗೆ ಸೂಚಿಸಿ ಅದಕ್ಕೆ ಬೇಕಾಗುವ ವ್ಯವಸ್ಥೆಯನ್ನು ಏರ್ಪಾಡುಗಳನ್ನು ಮಾಡಿ ಪುನೀತರಾದರು ಎಂಬುದು ಇಲ್ಲಿನ ಐತಿಹ್ಯ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಶ್ರೀ ಸ್ವಾಮಿಯವರು (ತಾರಕಾ ಅಸುರ) ರಾಕ್ಷಸರ ಸಂಹಾರ ನಿಮಿತ್ತ ಅವತಾರವನ್ನು ತಾಳಿದ್ದು, ತದನಂತರ ಸರ್ಪರೂಪ ಧಾರಣೆ ಮಾಡಿ, ತಪ್ಪಸ್ಸು ಮಾಡಿದ ಸ್ಥಳ ಮತ್ತು ದಾಯಾದಿ ಮತ್ಸರದಿಂದ ಸರ್ಪಗಳಿಗೂ ಹಾಗೂ ಗರುಡನಿಗೂ ದ್ವೇಷೋತ್ಪತ್ತಿಯಾಗಿದ್ದಾಗ ಸರ್ಪಗಳಿಗೆ ಗರುಡನಿಂದ ಶ್ರೀನೃಸಿಂಹ ಸ್ವರೂಪದಲ್ಲಿ ಅಭಯ ನೀಡಿದ ಸ್ಥಳ ಮತ್ತು ಮಾರ್ಕಂಡೇಯ ಮಹರ್ಷಿಗಳ ಮನವಿಗೆ ಮನ್ನಿಸಿ, ಘಟಿಕಾಸುರ ರಾಕ್ಷಸನನ್ನು ಸಂಹರಿಸಿದಾಗ ಮಹರ್ಷಿಗಳ ಸ್ತುತಿಗೆ ಮೆಚ್ಚಿ ವರವನ್ನು ನೀಡಿದಾಗ, ಮಹರ್ಷಿಗಳು ಯಾವ ದಕ್ಷಿಣ ಕ್ಷೇತ್ರದಲ್ಲಿ ಸರ್ಪ ರೂಪದಲ್ಲಿ ತಪಸ್ಸನ್ನು ಆಚರಿಸಿದೆಯೋ ಅದೇ ಕ್ಷೇತ್ರದಲ್ಲಿ ಸರ್ಪರೂಪದಲ್ಲಿ ಪೂರ್ವಾಭಿಮುಖವಾಗಿಯೂ ಯಾವ ದಕ್ಷಿಣ ಕ್ಷೇತ್ರದಲ್ಲಿ ಸರ್ಪಗಳಿಗೆ ಗರುಡನ ಭಾದೆಯಿಂದ ಶ್ರೀನೃಸಿಂಹ ಸ್ವರೂಪದಲ್ಲಿ ಅಭಯವನ್ನು ನೀಡಿದೆಯೋ ಅದೇ ಶ್ರೀನೃಸಿಂಹ ರೂಪದಲ್ಲಿ ಪಶ್ಚಿಮಾಭಿಮುಖವಾಗಿ ಏಕದೇಹನ್ಯವಾಗಿ ಷೋಡಶಕಲಾಸಂಭೂತನಾಗಿ ಅವಿರ್ಭವಿಸಬೇಕೆಂದು ಕೇಳಿದಾಗ ಮಹರ್ಷಿಗಳಿಗೆ ನೀಡಿದ ವರದಂತೆ ಶ್ರೀ ಸ್ವಾಮಿಯವರು ಉದ್ಭವವಾಗಿರುವುದು.

ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವು ಒಂದು ಚಿಕ್ಕ ಗುಡ್ಡದ ಮೇಲಿರುತ್ತದೆ. ಇದರ ಸುತ್ತಲಿನ ಪರಿಸರ ನೋಡಲು ಆನಂದವನ್ನು ಉಂಟು ಮಾಡುತ್ತದೆ. ದೇವಾಲಯದ ಸುತ್ತಮುತ್ತಲು ಇರುವ ಶಿಲೆಗಳೆಲ್ಲವು ಸಾಧಾರಣವಾಗಿ ಸರ್ಪರೂಪದಲ್ಲಿ ಕಾಣುವುದು ವಿಶೇಷವಾಗಿರುತ್ತದೆ. ಕಾಲಾಂತರದಲ್ಲಿ ಸುಮಾರು 200 ವರ್ಷದ ಹಿಂದೆ ಘನ ಸರ್ಕಾರದಿಂದ (ಮೈಸೂರು ಸಂಸ್ಥಾನ) ಪೌಳಿ ಹಾಗು ಹೊರಪ್ರಾಕಾರವನ್ನು ನಿರ್ಮಿಸಲಾಗಿದ್ದು, ಸುಮಾರು 40-45 ವರ್ಷಗಳ ಹಿಂದೆ ಕರ್ನಾಟಕ ಘನ ಸರ್ಕಾರವು ರಾಜಗೋಪುರವನ್ನು ನಿರ್ಮಿಸಿದೆ. ಶಾಸನಾಧಿಗಳು ಯಾವುದು ಇರುವುದಿಲ್ಲ. ಸ್ಕಂದ ಪುರಾಣ, ಶಿವ ಮಹಾಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಸ್ವಾಮಿರವರ ಉಲ್ಲೇಖವಿರುತ್ತದೆ. ದೇವಾಲಯದ ಮೂರ್ತಿಯು ಸ್ವಯಂ ಉದ್ಭವವಾಗಿದ್ದು, ಯಾವುದೇ ಕೆತ್ತನೆ ಇರುವುದಿಲ್ಲ.

ಶ್ರೀ ಕ್ಷೇತ್ರದಲ್ಲಿ ಸ್ವಾಮಿಯವರ ಸೇವೆಯನ್ನು ಮಾಡುವ ಭಕ್ತರಿಗೆ ಕುಜ ದೋಷ, ಸರ್ಪದೋಷ, ರಾಹು ಕೇತು ಗ್ರಹ ದೋಷ, ಚರ್ಮ ವ್ಯಾಧಿ, ವಿವಾಹ ಪ್ರತಿಬಂಧಕ ದೋಷ ಮತ್ತು ಸಂತಾನಪ್ರದ ದೋಷಾದಿಗಳು ನಿವಾರಣೆಯಾಗುತ್ತವೆ. ಶ್ರೀಸ್ವಾಮಿಯವರು ಉದ್ಭವ ಶಿಲಾ ಸಾಲಿಗ್ರಾಮ ಮೂರ್ತಿಯಾಗಿರುವುದರಿಂದ ಸ್ವಾಮಿಯವರ ತೀರ್ಥ, ಪಂಚಾಮೃತ ಹಾಗು ಸ್ವಾಮಿಯವರಿಗೆ ಧಾರಣೆ ಮಾಡುವ ಗಂಧಾಧಿಗಳು ಪ್ರಸಿದ್ಧಿಯಾಗಿವೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ, ಸರ್ಪಶಾಂತಿ, ಹೋಮ ಹವನಾದಿಗಳು ಶ್ರೀಕ್ಷೇತ್ರದ ವಿಶೇಷ ಸೇವೆಗಳಾಗಿರುತ್ತವೆ.

ಶ್ರೀಸ್ವಾಮಿಯವರಿಗೆ ಪ್ರತಿನಿತ್ಯವೂ ಶೈವಾಗಮ ಪದ್ಧತಿ ರೀತ್ಯಾ ತ್ರಿಕಾಲ ಪೂಜೆ ನಡೆಯುತ್ತಿದ್ದು, ಮಧ್ಯಾಹ್ನ ಪೂಜೆಯಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಾದಿಗಳು ವಿಶೇಷವಾಗಿ ನೆರವೇರುತ್ತಿದ್ದು, ಸ್ವಾಮಿಯವರ ಅಭಿಷೇಕದ ಸಂದರ್ಭದಲ್ಲಿ ದರ್ಶನ ಮಾತ್ರದಿಂದಲೇ ಸಕಲ ದೋಷಗಳು ನಿವಾರಣೆಯಾಗುತ್ತದೆ ಹಾಗು ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಸರ್ಪ ಶಾಂತಿ ಸೇವೆಗಳನ್ನು ನೆರವೇರಿಸುವುದರಿಂದ ಸಂತಾನಪ್ರದ ದೋಷ, ವಿವಾಹ ಪ್ರತಿಬಂಧಕ ದೋಷ, ಚರ್ಮ ವ್ಯಾಧಿ, ರಾಹು ಕೇತು, ಕುಜದೋಷಾದಿಗಳು ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ ಆಗಿದೆ. ಶ್ರೀ ಸ್ವಾಮಿಯವರ ಪುಷ್ಯ ಶುದ್ಧ ಷಷ್ಠಿಯಂದು ನಡೆಯುವ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಕೆಲವು ಭಕ್ತರು ಉಪ್ಪು ಮತ್ತು ಮೆಣಸನ್ನು ರಥಕ್ಕೆ ಹಾಕುವುದು ಹಾಗು ಬಾಳೆಹಣ್ಣಿಗೆ ಧವನವನ್ನು ಸಿಕ್ಕಿಸಿ ರಥದ ಕಲಶಕ್ಕೆ ಹಾಕುವುದು, ನಾಗರ ಕಲ್ಲುಗಳಿಗೆ ತನಿ (ಹಾಲು) ಎರೆಯುವುದು ವಿಶೇಷವಾಗಿರುತ್ತದೆ. ಶ್ರೀ ಸ್ವಾಮಿಯವರ ನೈರುತ್ಯ ಭಾಗದಲ್ಲಿರುವಂತಹ ಕುಮಾರಧಾರಾ ಪುಷ್ಕರಣಿಯು (ಕಲ್ಯಾಣಿ) ವಿಶೇಷವಾಗಿದ್ದು, ಸ್ನಾನ ಮಾತ್ರದಿಂದಲೇ ಸಕಲ ದೋಷಗಳು ನಿವಾರಣೆಯಾಗಿ ಮನೋಭೀಷ್ಟವು ಲಭಿಸುವುದು ವಿಶೇಷವಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿ ದೊರೆಯುವ ತೀರ್ಥಕಾಯಿ(ಪೂರ್ಣಫಲ)ಯಿಂದ ವಾಸ್ತುದೋಷ ನಿವಾರಣೆ, ಯಂತ್ರದಿಂದ ನಾಗದೋಷ ಪರಿಹಾರಕ್ಕೆ, ಮೂಲ ಮೃತ್ತಿಕೆಯಿಂದ ಚರ್ಮವ್ಯಾಧಿ, ಬಂಜೆತನ, ರೋಗ ರುಜಿನಗಳ ನಿವಾರಣೆಗೆ ಮತ್ತು ಶ್ರೀ ಸ್ವಾಮಿಯವರ ತೀರ್ಥವನ್ನು ಸೇವನೆ ಮಾಡುವುದರಿಂದ ಹಾಗು ಅನ್ನ ಪ್ರಸಾದವನ್ನು ಸ್ವೀಕರಿಸುವುದರಿಂದ ಜನ್ಮಜನ್ಮಾಂತರಗಳ ದೋಷಗಳು ನಿವಾರಣೆಯಾಗುತ್ತಿರುವುದರಿಂದ ಸಾವಿರಾರು ಭಕ್ತರು ಆಗಮಿಸುತ್ತಿರುತ್ತಾರೆ.

* ವಿಶೇಷತೆಗಳು:
* ಈ ದೇವಾಲಯವು ಏಕಶಿಲೆಯಲ್ಲಿ ಕೆತ್ತಲಾದ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀನರಸಿಂಹ ದೇವರ ವಿಗ್ರಹಗಳಿಗೆ ಹೆಸರುವಾಸಿಯಾಗಿದೆ.
* ಇಲ್ಲಿನ ನರಸಿಂಹ ಸ್ವಾಮಿಯ ಮುಖವು ಪಶ್ಚಿಮಕ್ಕೆ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಮುಖವು ಪೂರ್ವಕ್ಕೆ ಇದೆ.
* ಇದು ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ.

* ಪ್ರಮುಖ ಹಬ್ಬಗಳು:
* ಚಂಪಾ ಷಷ್ಠಿ ಇಲ್ಲಿನ ಪ್ರಮುಖ ಹಬ್ಬವಾಗಿದ್ದು, ಈ ಸಮಯದಲ್ಲಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
* ತುಳು ಷಷ್ಠಿ.
* ವಿಜಯದಶಮಿ.

* ತಲುಪುವುದು ಹೇಗೆ:
* ಈ ದೇವಾಲಯವು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.
* ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಮತ್ತು ರೈಲುಗಳು ಲಭ್ಯವಿದೆ.
* ದೊಡ್ಡಬಳ್ಳಾಪುರದಿಂದ ಘಾಟಿಗೆ ಬಸ್ಸುಗಳು ಮತ್ತು ಆಟೋ ರಿಕ್ಷಾಗಳು ಲಭ್ಯವಿದೆ.

ShareTweetSendShare
Join us on:

Related Posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

by Shwetha
May 3, 2026
0

ಚುನಾವಣೋತ್ತರ ಸಮೀಕ್ಷೆಗಳು ಕೇವಲ ಅಂಕಿಅಂಶಗಳ ಆಟವಾಗಿದ್ದು ಅವುಗಳ ಮೇಲೆ ನನಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ....

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

by Shwetha
May 3, 2026
0

ರಾಜ್ಯದ ಜನಸಾಮಾನ್ಯರಿಗೆ ಈಗ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲ ಮತ್ತು ತರಕಾರಿಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಅಡುಗೆ ಎಣ್ಣೆಯ...

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

by Shwetha
May 3, 2026
0

ಅಮೆರಿಕದೊಂದಿಗೆ ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಆಸಾದಿ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಯಾವುದೇ ಒಪ್ಪಂದಗಳಿಗೆ...

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

ಸಾ ರಾ ಗೋವಿಂದು ಅಣ್ಣಾವ್ರ ಹೆಸರು ಕೆಡಿಸುತ್ತಿದ್ದಾರೆ ನಟ ಚೇತನ್ ಅಹಿಂಸಾ ಕಿಡಿ: ಮನೆ ಮುತ್ತಿಗೆ ಹಾಕಿದವರ ವಿರುದ್ಧ ಪೊಲೀಸ್ ದೂರು ದಾಖಲು

by Shwetha
May 3, 2026
0

ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರನಟ ಡಾ. ರಾಜ್...

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

by Shwetha
May 3, 2026
0

ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಊಟ ಮಾಡುವವರಿಗೆ ಇದೀಗ ಮತ್ತಷ್ಟು ಖರ್ಚು ಎದುರಾಗಲಿದೆ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ತಮ್ಮ ಮೆನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram