ಆಟಗಾರರಿಗೆ ಶಾಕ್ ಕೊಟ್ಟ ಲಂಕಾ ಕ್ರಿಕೆಟ್ ಬೋರ್ಡ್
ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಆಟಗಾರರ ವೇತನವನ್ನು ಕಡಿತಗೊಳಿಸಿದ ಬಗ್ಗೆ ವಿವಾದ ಭುಗಿಲೆದ್ದಿದೆ. ಆಟಗಾರರ ವೇತನವನ್ನು ಶೇಕಡಾ 35 ರಷ್ಟು ಕಡಿತಗೊಳಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಆದ್ರೆ ನಾಯಕ ಕರುಣರತ್ನೆ, ಮ್ಯಾಥ್ಯೂಸ್, ಸುರಂಗ ಲಕ್ಮಲ್ ಮತ್ತು ದಿನೇಶ್ ಚಂಡಿಮಾಲ್ ಸೇರಿದಂತೆ ಹಲವಾರು ಹಿರಿಯ ಕ್ರಿಕೆಟಿಗರು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಹೊಸ ಒಪ್ಪಂದದ ಪ್ರಕಾರ ವಿಕೆಟ್‍ಕೀಪರ್‍ಗಳಾದ ನಿರೋಷನ್ ದಿಕ್ವೆಲ್ಲಾ ಮತ್ತು ಧನಂಜಯ್ ಡಿ ಸಿಲ್ವಾ ಮಾತ್ರ ಲಾಭ ಪಡೆಯಲಿದ್ದಾರೆ. ಈ ಇಬ್ಬರು ಆಟಗಾರರ ಮಾಸಿಕ ವೇತನ ಸುಮಾರು 73 ಲಕ್ಷ ರೂ. ಇದರೊಂದಿಗೆ ಬೋರ್ಡ್ ಈ ಇಬ್ಬರು ಆಟಗಾರರನ್ನು ಟಾಪ್ ಕ್ಯಾಟಗಿರಿಗೆ ಸೇರಿಕೊಂಡಿದೆ.

ಕ್ಯಾಪ್ಟನ್ ಗೂ ಶಾಕ್
ಸದ್ಯ ಅತ್ಯುತ್ತಮ ಫಾರ್ಮ್‍ನಲ್ಲಿರುವ ಕ್ಯಾಪ್ಟನ್ ಕರುಣರತ್ನೆ ಅವರ ಸಂಬಳದಲ್ಲಿ ಕೂಡ 22 ಲಕ್ಷ ರೂ ಕಡಿತ ಮಾಡಲಾಗಿದೆ. ಈ ವರ್ಷದ ಜನವರಿಯಲ್ಲಿ ವಾಂಡರರ್ಸ್‍ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‍ನಲ್ಲಿ ಶತಕ ಬಾರಿಸಿದ ಕರುಣರತ್ನ, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ 3 ಇನ್ನಿಂಗ್ಸ್‍ಗಳಲ್ಲಿ 427 ರನ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಹೊಸ ಒಪ್ಪಂದದ ಪ್ರಕಾರ ಕರುಣರತ್ನ ಅವರ ಸಂಬಳವನ್ನು 73 ಲಕ್ಷ ರೂ.ಗಳಿಂದ 51 ಲಕ್ಷಕ್ಕೆ ಇಳಿಸಲಾಗಿದೆ.








