ಶಿವಮೊಗ್ಗ: ದೇಶದ ಕೋಟ್ಯಂತರ ಹಿಂದೂಗಳ ಶತಮಾನಗಳ ಕನಸು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅಬಾಲ ವೃದ್ಧರಾದಿಯಾಗಿ ದೇಶಾದ್ಯಂತ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಕಾರ್ಯ ಆಂದೋಲನ ರೀತಿ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಉಳವಿ ಹೋಬಳಿ ಕಟ್ಟಿನಕರೆ ಗ್ರಾಮದ ಮಹೇಶ ಮತ್ತು ಜ್ಯೋತಿ ದಂಪತಿಯ ಪುತ್ರಿ ಸಿರಿ, ತಾನು ಕೂಡಿಟ್ಟ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾಳೆ.
ನಾಲ್ಕನೇ ತರಗತಿಯಲ್ಲಿ ಒದುತ್ತಿರುವ ಬಾಲಕಿ ಸಿರಿ, ಸುಮಾರು 4ರಿಂದ 5 ವರ್ಷದಿಂದ ಕೂಡಿಟ್ಟ ಚಿಲ್ಲರೆ ಹಣ 2380ರೂ.ಗಳನ್ನು ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಬಂದ ಸ್ವಯಂಸೇವಕರ ಕೈಗೆ ಹಸ್ತಾಂತರಿಸಿದ್ದಾಳೆ.
ದೇಣಿಗೆ ನೀಡಿದವರಿಗೆ ತುಳಸಿ ಗಿಡ ವಿತರಣೆ
ಅಯೋಧ್ಯೆ ಶ್ರೀರಾಮ ಮಂದಿರದ ನಿಧಿ ಸಂಗ್ರಹಣಾ ಅಭಿಯಾನದ ಅಂಗವಾಗಿ ಮಡಿಕೇರಿಯ ಸಿದ್ದಾಪುರ ನಗರದಲ್ಲಿರುವ ಹಿಂದೂಗಳ ಅಂಗಡಿ ಮತ್ತು ಮನೆಗಳಿಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ಮಾಹಿತಿ ನೀಡಿ ಹಣ ಸಂಗ್ರಹಿಸಲಾಗುತ್ತಿದೆ.

ರಾಮಮಂದಿರ ಅಭಿಯಾನಕ್ಕೆ ದೇಣಿಗೆ ನೀಡಿದ ಪ್ರತಿಯೊಂದು ಹಿಂದೂಗಳ ಅಂಗಡಿಗಳಿಗೆ ಮತ್ತು ಮನೆಗಳಿಗೆ ತುಳಸಿ ಗಿಡವನ್ನು ಉಚಿತವಾಗಿ ನೀಡುತ್ತಿರುವ ಸಿದ್ದಾಪುರದ ರಾಜೇಂದ್ರಸಿಂಗ್ ಹಾಗೂ ಕಾರ್ಯಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








