ದೆಹಲಿಯತ್ತ ಬಿ.ಶ್ರೀರಾಮುಲು : ಖುಲಾಯಿಸುತ್ತಾ ಅದೃಷ್ಠ, ಸಿಎಂ ಅಥವಾ ಡಿಸಿಎಂ..?
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಸದ್ದು ಜೋರಾಗುತ್ತಿರುವ ಬೆನ್ನಲ್ಲೆ ಸಚಿವ ಬಿ.ಶ್ರೀರಾಮುಲು ಅವರು ದೆಹಲಿಯತ್ತ ಹೊರಟಿದ್ದಾರೆ.
ಪಕ್ಷದ ಹೈಕಮಾಂಡ್ ಯಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ರಾಮುಲು ಅವರು ದೆಹಲಿಯತ್ತ ತೆರಳಿದ್ದಾರೆ ಎಂದು ಹೇಳಲಾಗುತಿದೆ. ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ರಾಮುಲು ದೆಹಲಿಗೆ ಹೋಗಿರುವುದು ಕುತೂಹಲ ಕೆರಳಿಸಿದೆ.
ಈಗಾಗಲೇ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ದೆಹಲಿಗೆ ದೌಡಾಯಿಸಿದ್ದಾರೆ. ಇದರ ನಡುವೆ ಶ್ರೀರಾಮುಲು ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಮೌನವಾಗಿ ಕುಳಿತಿದ್ದರೆ, ಅತ್ತ ಆಪ್ತರೆಲ್ಲಾ ದೆಹಲಿಯತ್ತ ಮುಖ ಮಾಡುತ್ತಿದ್ದಾರೆ.
ರಾಮುಲುಗೆ ಖುಲಾಯಿಸುತ್ತಾ ಅದೃಷ್ಠ
ಎಲ್ಲರಿಗೂ ಗೊತ್ತಿರುವಂತೆ ಸಚಿವ ಶ್ರೀ ರಾಮುಲು ಡಿಸಿಎಂ ಸ್ಥಾನ ಆಕಾಂಕ್ಷಿ. ಕಳೆದ ಚುನಾವಣೆಯಲ್ಲಿ ರಾಮುಲುಗೆ ಡಿಸಿಎಂ ಸ್ಥಾನ ಕೊಡಲಾಗುವುದು ಎಂದು ಸ್ವತಃ ಬಿಜೆಪಿ ನಾಯಕರೇ ಅನೇಕ ವೇದಿಕೆಗಳಲ್ಲಿ ಹೇಳಿದ್ದರು. ಆದ್ರೆ ಬದಲಾದ ಪರಿಸ್ಥಿತಿಯಲ್ಲಿ ರಾಮುಲುಗೆ ಕೊಟ್ಟ ಮಾತು ತಪ್ಪಬೇಕಾಗಿಯಿತು. ಅಲ್ಲದೆ ಆರೋಗ್ಯ ಇಲಾಖೆ ಖಾತೆಯನ್ನೂ ವಾಪಸ್ ಪಡೆಯಲಾಯಿತು. ಇಷ್ಟೆಲ್ಲಾ ಆದ್ರೂ ಕೂಡ ರಾಮುಲು ಮಾತ್ರ ಪಕ್ಷ ನಿಷ್ಠೆ ತೋರಿಸುತ್ತಾ ತಮ್ಮ ಕೆಲಸ ಮಾಡಿಕೊಂಡು ಸಾಗಿದ್ದರು. ಇದನ್ನು ಗಮನಿಸಿರುವ ಹೈಕಮಾಂಡ್, ಅವರಿಗೆ ಮಹತ್ವದ ಹುದ್ದೆ ನೀಡುವ ಯೋಚನೆಯಲ್ಲಿ ಇದ್ದಂತೆ ಇದೆ. ಇದೇ ಕಾರಣಕ್ಕೆ ಅವರನ್ನು ದೆಹಲಿಗೆ ಕರೆಸಿಕೊಂಡಿದೆ ಎಂದು ರಾಜಕೀಯ ವಲಯದಲ್ಲಿರುವ ಮಾತು.