ಮೂಲ, ವಲಸಿಗ ಪ್ರಶ್ನೆ ನಮ್ಮಲ್ಲಿ ಇಲ್ಲ : ಶ್ರೀರಾಮುಲು
ಬಳ್ಳಾರಿ : ರಾಜ್ಯ ಬಿಜೆಪಿಯಲ್ಲಿ ಮೂಲ ಬಿಜೆಪಿಗರು, ವಲಸೆ ಬಿಜೆಪಿಗರು ಎಂಬ ಗುದ್ದಾಟ ನಡೆಯುತ್ತಿರುವ ಬಗ್ಗೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿ, ನಮ್ಮಲ್ಲಿ ಮೂಲ, ವಲಸಿಗ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗುಂಪುಗಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ.
ಯಾರದ್ದೋ ಮನೆಯಲ್ಲಿ ಒಂದಿಷ್ಟು ಮಂದಿ ಜನ ಸೇರಿ ಊಟ ಮಾಡ್ತಾರೆ ಅಂದ್ರೆ ಅದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ.
ನಮ್ಮ ಸಿಎಂ ಯಡಿಯೂರಪ್ಪ ಅವರ ಮಾತು ಮೀರಿ ಯಾರೂ ಹೋಗೋಲ್ಲ. ಮೂಲ, ವಲಸಿಗ ಪ್ರಶ್ನೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಸಿಎಂ ಯಡಿಯೂರಪ್ಪ ಮಾಡ್ತಾರೆ.
ಕೆಲವು ತಾಂತ್ರಿಕ ವಿಚಾರಗಳಿಂದಾಗಿ ಸಂಪುಟ ವಿಸ್ತರಣೆ ವಿಳಂಬ ಆಗಿವೆ. ಯಾರಿಗೆ ಮಂತ್ರಿಗಿರಿ ಕೊಡಬೇಕೋ ಮುಖ್ಯಮಂತ್ರಿ ಅವರು ಡಿಸೈಡ್ ಮಾಡುತ್ತಾರೆ ಎಂದು ತಿಳಿಸಿದರು. ಮೋದಿಯವರು ಪ್ರಧಾನಿಯಾಗಿದ್ದು ನಮ್ಮ ಪುಣ್ಯ : ಆನಂದ್ ಸಿಂಗ್
ಇದೇ ವೇಳೆ ಶಾಸಕ ಸೋಮಶೇಖರ್ ರೆಡ್ಡಿ ವಿಚಾರವಾಗಿ ಮಾತನಾಡಿ, ಬಳ್ಳಾರಿ ಜಿಲ್ಲೆಯ ವಿಭಜನೆ ಕುರಿತು ಸೋಮಶೇಖರ್ ರೆಡ್ಡಿ ಅವರನ್ನು ಸಹ ಮನವೊಲಿಸಲಾಗುತ್ತದೆ.
ಅವರು ಯಾವುದೋ ಒತ್ತಡದಲ್ಲಿ ಹೇಳಿರಬಹುದು. ಅವರಿಗೆ ಒತ್ತಡ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆ ವಿಭಜನೆ ಮಾಡಲಾಗಿದೆ.
ಬಳ್ಳಾರಿ ವಿಭಜನೆಯಲ್ಲಿ ಯಾರಿಗೂ ಸಹ ವಿರೋಧ ಇಲ್ಲ. 6 ತಾಲೂಕುಗಳನ್ನು ವಿಜಯನಗರ ಜಿಲ್ಲೆಗೆ ಬಿಟ್ಟರೆ, ನಮಗೆ ಐದು ಉಳಿಯುತ್ತವೆ. ಸಚಿವಸ್ಥಾನ ತ್ಯಾಗ ಮಾಡ್ಲಿ : `ಸಾಹುಕಾರ್’ ವಿರುದ್ಧ ಬುಸುಗುಟ್ಟಿದ ರೇಣುಕಾಚಾರ್ಯ
ಹಾಗಾಗಿ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಗೆ ಸೇರಿಸಲು ಕೂಗು ಎದ್ದಿದೆ. ಅದಕ್ಕೆ ನಮ್ಮ ಸಹಮತ ಇದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










