ಆಪ್ತನ ಬಂಧನ : ಸಚಿವ ರಾಮುಲು ಪ್ರತಿಕ್ರಿಯೆ ಏನು..?
ಬೆಂಗಳೂರು : ಅನೇಕರಿಗೆ ಕೆಲಸ ಕೊಡಿಸೋದು ಸೇರಿದಂತೆ ವಿವಿಧ ಆಮಿಷಗಳಿಂದ ಕೋಟಿ ಕೋಟಿ ಹಣ ಪಡೆದಂತ ಆರೋಪದಲ್ಲಿ, ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಅವರನ್ನು ಎಸಿಬಿಯಿಂದ ಬಂಧಿಸಲಾಗಿದೆ. ಈ ಕುರಿತು ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಸುದ್ದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದೆ.
ಯಾರು ಯಾರ ಹೆಸರನ್ನು ಕೂಡ ದುರುಪಯೋಗ ಮಾಡಿಕೊಳ್ಳಬಾರದು. ರಾಜು ನನಗೆ ಗೊತ್ತಿರುವಂತ ಹುಡುಗ, ಈಗಾಗಲೇ ತನಿಖೆ ನಡೆಸುತ್ತಿದೆ.
ತನಿಖೆ ನಡೆಯುತ್ತಿರುವಂತ ಸಂದರ್ಭದಲ್ಲಿ ಮಾತನಾಡುವುದು ಒಳ್ಳೆಯದಲ್ಲ ಎಂದರು.
ಎಫ್ಐಆರ್ ದಾಖಲಾಗಿದೆ. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆದು ಯಾರದ್ದು ತಪ್ಪು ಎನ್ನುವ ಬಗ್ಗೆ ತಿಳಿಯಲಿ. ಈ ವಿಚಾರವಾಗಿ ವಿಜಯೇಂದ್ರ ಜೊತೆಗೆ ಮಾತುಕತೆ ನಡೆಸುತ್ತೇನೆ.
ಈ ವಿಚಾರದಲ್ಲಿ ಮಿಸ್ ಕಮ್ಯೂನಿಕೇಷನ್ ಆಗಿದೆ. ಕಾನೂನು ಪ್ರಕಾರ ನಾನು ಯಾರನ್ನು ಕಾಪಾಡುವ ಕೆಲಸ ಮಾಡೋದಿಲ್ಲ. ಈಗ ತನಿಖೆ ನಡೆಯುತ್ತಿದೆ.
ತನಿಖೆ ನಡೆದು, ರಾಜು ಅವರದ್ದು ತಪ್ಪಿದ್ಯಾ ಇಲ್ಲವಾ ಅಂತ ತನಿಖೆಯಿಂದ ಹೊರ ಬರಲಿ ಎಂದರು.