ಮಹೇಶ್ ಬಾಬು ಜೊತೆ ಮುಂದಿನ ಚಿತ್ರ ಸಾಹಸಮಯ ಚಿತ್ರ…
ತೆಲುಗಿನ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಮೂವಿ ಮಾಡುತ್ತಿರುವುದು ನಿಮಗೆ ಗೊತ್ತಿರುವ ವಿಚಾರ. ಚಿತ್ರ ಸೆಟ್ಟೇರಲು ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಆದರೆ ನಿರ್ದೇಶಕ ರಾಜಮೌಳಿ ಚಿತ್ರದ ಕುರಿತು ಅಪ್ಡೇಟ್ ಒಂದನ್ನ ನೀಡಿದ್ದಾರೆ.
ಟೊರೊಂಟೊ ನಡೆಯುತ್ತಿರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2022 ರಲ್ಲಿ ಭಾಗವಹಿಸಿರುವ SS ರಾಜಮೌಳಿ, ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಅವರೊಂದಿಗಿನ ತಮ್ಮ ಮುಂದಿನ ಚಿತ್ರ ಜಾಗತಿಕ ಸಾಹಸಮಯ (globetrotting action adventure) ಚಿತ್ರವಾಗಿರಲಿದೆ ಎಂದು ಬಹಿರಂಗಪಡಿಸಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಇದೇ ಮೊದಲ ಭಾರಿಗೆ ಎಸ್ಎಸ್ ರಾಜಮೌಳಿ, ಮಹೇಶ್ ಬಾಬು ಜೊತೆ ಪ್ರಾಜೆಕ್ಟ್ ಒಂದಕ್ಕೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಕೆ ಎಲ್ ನಾರಾಯಣ್ ಬಂಡವಾಳ ಹೂಡುತ್ತಿದ್ದಾರೆ. RRR ನಿರ್ದೇಶಕ ಪ್ರಸ್ತುತ US ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ಅವರ SSMB 28 ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರ ಮುಗಿದ ನಂತರ ರಾಜಮೌಳಿ ಅವರ ಚಿತ್ರಕ್ಕಾಗಿ ತಯಾರಿ ಪ್ರಾರಂಭಿಸಲಿದ್ದಾರೆ.







