CBSE –ಪರೀಕ್ಷೆ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಶಿಕ್ಷಣ ಸಚಿವ : ಸುರೇಶ್ ಕುಮಾರ್ ಹೇಳಿದ್ದೇನು..?
ಬೆಂಗಳೂರು: ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಕೇಂದ್ರ ಸರ್ಕಾರ ಸಿಬಿಎಸ್ಇ ಯ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿದೆ. ಇದರೊಂದಿಗೆ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ.
ಆದ್ರೆ ಇದು ರಾಜ್ಯಕ್ಕೆ ಈವರೆಗೂ ಅನ್ಯಯವಾಗಿಲ್ಲ. ಹೌದು ಈ ಬಗ್ಗೆ ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ರಾಜ್ಯದ SSLC ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದ ಗೊಂದಲಗಳನ್ನ ದೂರ ಮಾಡಿದದಾರೆ.
ಟ್ವೀಟ್ ನಲ್ಲಿ ಏನಿದೆ..?
ನಮ್ಮ ರಾಜ್ಯದ SSLC ಪರೀಕ್ಷೆಗಳು ಪ್ರಾರಂಭ ವಾಗಬೇಕಿರುವುದು 21 – 6 – 2021 ರಿಂದ, ಅಂದರೆ ಜೂನ್ 21 ರಿಂದ. ಆದ್ದರಿಂದ ನಮ್ಮ ರಾಜ್ಯದಲ್ಲಿ ಸಿಬಿಎಸ್ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಯುಪಿಯಲ್ಲಿ ನಾಯಿಗಳಿಗೂ ಸೇಫ್ಟಿ ಇಲ್ವಾ..! ನಾಯಿಯ ಖಾಸಗಿ ಅಂಗ ಕತ್ತರಿಸಿದ ಪಾಪಿ..!
ದಾವಣಗೆರೆ ಆನಗೋಡು ಬಳಿ ಮಾಜಿ ಸಚಿವ ಯು.ಟಿ. ಖಾದರ್ ಕಾರು ಅಪಘಾತ
ದೇಶದಲ್ಲಿ ಕೊರೊನಾ ಮರಣಮೃದಂಗ – ಒಂದೇ ದಿನ 1,027 ಮಂದಿ ಸಾವು – 2 ಲಕ್ಷದತ್ತ ಕೊರೊನಾ..!
ಮೋದಿ ನಾಯಕತ್ವದಲ್ಲಿ ಪಾಕ್ ಗೆ ತಕ್ಕ ಪಾಠ : ಅಮೆರಿಕ ಬೇಹುಗಾರಿಕೆ ವರದಿ