ಬಳ್ಳಾರಿ : ಜೂನ್ 28 ರಿಂದ ಜುಲೈ ನಾಲ್ಕರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರ ಜೊತೆ ಸಮಾಲೋಚನೆ ನಡೆಸಿ, ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಮುಂದೂಡಿದ್ದೇವೆ. ಕೇಂದ್ರ ಗೃಹ ಸಚಿವಾಲಯ ಕೂಡ ಮಾರ್ಗಸೂಚಿ ನೀಡಿದೆ. ಆದರೆ ಜೂನ್ 28 ರಿಂದ ಜುಲೈ ನಾಲ್ಕರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುತ್ತದೆ.ಪರೀಕ್ಷೆ ಬಗ್ಗೆ ಹೈಕೋರ್ಟ್ ಗೂ ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಇತ್ಯರ್ಥ ಮಾಡಿ, ಪರೀಕ್ಷೆ ಮಾಡಲು ಕೆಲವು ನಿಯಮಗಳನ್ನು ಮಾಡಿದೆ.
ಈ ಪರೀಕ್ಷೆಯಲ್ಲಿ ಎರಡು ವಿಚಾರವಾಗಿ ಪ್ರಾಮುಖ್ಯತೆ ನೀಡಿದ್ದೇವೆ. ಮೊದಲನೇಯದು ಮಕ್ಕಳ ಸುರಕ್ಷತೆ, ಎರಡನೆಯದು ಮಕ್ಕಳ ಆತ್ಮವಿಶ್ವಾಸ. ನಾಲ್ಕೈದು ಕ್ರಮ ಕೈಗೊಂಡಿದ್ದೇವೆ.ಮೂರೂವರೆ ಅಡಿ ಸಾಮಾಜಿಕ ಅಂತರ ಇರಬೇಕು. ಒಂದು ಪರೀಕ್ಷೆ ಹಾಲ್ ನಲ್ಲಿ 18 ಜನರಿಂದ 20 ಜನರನ್ನೂ ಕೂಡಿಸುತ್ತೇವೆ. ಮಾಸ್ಕ್ ಕಡ್ಡಾಯವಾಗಿರಬೇಕು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆ ಉಚಿತವಾಗಿ ನೀಡಲಾಗುತ್ತಿದೆ. ಕೈಯಾರೇ ತಯಾರಿಸಿದ ಮಾಸ್ಕ್ ಇದಾಗಿದೆ.
8,48,203 ಮಕ್ಕಳು ಪರೀಕ್ಷೆ ಬರಿಯುತ್ತಾರೆ.ಪ್ರತಿ ಮಗುವಿಗೆ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಯುತ್ತದೆ. ತಪಾಸಣೆಯಲ್ಲಿ ಮಗುವಿಗೆ ಅನಾರೋಗ್ಯ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ವ್ಯವಸ್ಥೆ ಮಾಡಲಾಗುವುದು.ಸ್ಯಾನಿಟೈಜೇಷನ್ ಕೂಡ ಮಾಡಲಾಗುತ್ತದೆ. ಸ್ವಯಂ ಸೇವಕರು ಈ ಕಾರ್ಯ ಮಾಡುತ್ತಾರೆ.
ಪೊಷಕರು ಯಾರೂ ಕೂಡ ಮಕ್ಕಳನ್ನು ಬಿಡಲು ಗುಂಪು ಕಟ್ಟಕೊಂಡು ಬರಬಾರದು. ಅವರಿಗೆ ಒಳಗಡೆ ಪ್ರವೇಶ ಇರುವುದಿಲ್ಲ. ಪರೀಕ್ಷೆ ಕೇಂದ್ರದ ಸೂಪರ್ ವೈಸರ್ ಗಳು ಕೂಡ ಈ ಎಲ್ಲಾ ಕ್ರಮಗಳಿಗೆ ಒಳಪಡುತ್ತಾರೆ.
ಮಕ್ಕಳು ಕಾದಾರಿದ ನೀರು ಮನೆಯಿಂದ ತರಬೇಕು. ಪರೀಕ್ಷಾ ಕೇಂದ್ರಕ್ಕೆ ಮಕ್ಕಳು ಬರಲು ಒಂದು ಸರ್ವೇ ಮಾಡಿದ್ದೇವೆ.ಉಚಿತವಾಗಿ ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುತ್ತದೆ. ರೂಟ್ ಕೂಡ ಫೀಕ್ಸ್ ಮಾಡಲಾಗುತ್ತದೆ. ಚಂದನ ದೂರದರ್ಶನ ವಾಹಿನಿ ಮೂಲಕ ಪಾಠ ಮಾಡಿಸಿದ್ದೇವೆ. ಜೂನ್ 10 ರಿಂದ 20 ರವರೆಗೆ ಪುನರ್ಮನನ ತರಗತಿ ಚಂದನ ವಾಹಿನಿಯಲ್ಲಿ ಮಾಡಲಾಗುತ್ತದೆ.
ಜುಲೈ ನಾಲ್ಕರಂದು ಪರೀಕ್ಷೆ ಮುಗಿಯುತ್ತದೆ. ಜುಲೈ ಕೊನೆವಾರ, ಅಥವಾ ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ನೀಡಲಾಗುತ್ತದೆ. ಪೂರಕ ಪರೀಕ್ಷೆಗೆ ಅವಕಾಶವಿದೆ. ಈ ಪರೀಕ್ಷೆಯಲ್ಲಿ ಅನಾರೋಗ್ಯದ ಕಾರಣ ಬರೆದಿರಲಿಲ್ಲಾ ಅಂದ್ರೆ ಅವರನ್ನು ಪೂರಕ ಪರೀಕ್ಷೆಯಲ್ಲಿ ಬರೆಯಲಾಗುತ್ತದೆ. ಅವರನ್ನು ಫ್ರೇಷರ್ ಕ್ಯಾಂಡಿಡೆಟ್ ಅಂತ ಪರಿಗಣಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.








