ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೇ, ನಿಮಗೆ ಶುಭವಾಗಲಿ.
ಮಂಗಳೂರು, ಜೂನ್ 25: ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇಂದಿನಿಂದ ನಡೆಯಲಿದೆ. ಸರಕಾರ ಈ ಪರೀಕ್ಷೆಗಳನ್ನು ಸುಲಲಿತವಾಗಿ ಸುರಕ್ಷಿತವಾಗಿ ನಡೆಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಹೆತ್ತವರೇ,
ಪ್ರತಿ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮಾತ್ರವೇ ನಿರ್ವಹಿಸುತ್ತಿದ್ದರೆ ಈ ಬಾರಿ ಸರ್ಕಾರ ಇದರ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಆದುದರಿಂದ ಮಕ್ಕಳಿಗೆ ಆಶೀರ್ವದಿಸಿ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ಕೊಡಿ.
ಪರೀಕ್ಷೆಗಳನ್ನು ಎದುರಿಸಲು ಆತ್ಮವಿಶ್ವಾಸದಿಂದ ಹೊರಟಿರುವ ವಿದ್ಯಾರ್ಥಿಗಳೇ
ಮಾಸ್ಕ್ ಧರಿಸಿ,
ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
ನೀರಿನ ಬಾಟಲ್, ಹಾಲ್ ಟಿಕೆಟ್, ಶಾಲಾ ಐಡಿ ಕಾರ್ಡ್ ಮರೆಯಬೇಡಿ.
ನಿರ್ಭೀತರಾಗಿ ಪರೀಕ್ಷೆಯನ್ನು ಬರೆಯಿರಿ.
ಉತ್ತಮ ಫಲಿತಾಂಶ ನಿಮ್ಮದಾಗಲಿ, ನಿಮಗೆ ಶುಭವಾಗಲಿ