SSLC ಪೂರಕ ಪರೀಕ್ಷೆಗೆ ದಿನಾಂಕ ನಿಗದಿ
SSLC ಪೂರಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ.. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು SSLC ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದ್ರಂತೆ ಸೆಪ್ಟೆಂಬರ್ 27, 29 ರಂದು SSLC ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಯಲಿದೆ.. ಇನ್ನೂ ಕೊರೊನಾ ನಡುವೆ ಪೂರಕ ಪರೀಕ್ಷೆಯನ್ನು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದಾಗಿ ಹಾಗೂ ಶೈಕ್ಷಣಿಕ ಬೆಳವಣಿಗೆಗಾಗಿ ಸರಳೀಕರಿಸಲಾಗಿದೆ ಎಂದು ಬೋರ್ಡ್ ತಿಳಿಸಿದೆ. ಒಂದು ದಿನ ಕೋರ್ ವಿಷಯಗಳು ಮತ್ತೊಂದು ದಿನ ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ವರಮಹಾಲಕ್ಷ್ಮಿ ವ್ರತಕ್ಕೆ ಭರ್ಜರಿ ಶಾಪಿಂಗ್ – ಹಬ್ಬದ ಸಂಭ್ರಮದಲ್ಲಿ ಕೊರೊನಾ ಮರೆತ ಜನ.. ಸಾಮಾಜಿಕ ಅಂತರ ಮಾಯ..!
ಸೆಪ್ಟೆಂಬರ್ 27ರಂದು ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. 29ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಇನ್ನೂ 2020 -21ನೇ ಸಾಲಿನ ಮುಖ್ಯ ಪರೀಕ್ಷೆಗೆ ನೊಂದಾಯಿಸಿ ಕೋವಿಡ್ ಮತ್ತು ಬೇರೆ ಬೇರೆ ಅನಾರೋಗ್ಯದಿಂದ ಪರೀಕ್ಷೆಗೆ ಗೈರಾದಂತಹ ವಿದ್ಯಾರ್ಥಿಗಳು ಮತ್ತು ನೊಂದಾಯಿಸಿದ ಅರ್ಹ ಶಾಲಾ ವಿದ್ಯಾರ್ಥಿಗಳು , ಖಾಸಗಿ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.