ಚಂದನವನದಲ್ಲಿ ಮತ್ತೆ ಸ್ಟಾರ್ ವಾರ್ : ಕೋಟಿಗೊಬ್ಬ-3 & ಸಲಗ ಒಂದೇ ದಿನ ರಿಲೀಸ್..! kotigobba-3 saaaksha tv
ಬೆಂಗಳೂರು : ಚಂದನವನದಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾಗಿದೆ.
ಅಕ್ಟೋಬರ್ ನಿಂದ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಭರ್ತಿಗೆ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಗೆ ಸಾಲುಕಟ್ಟಿನಿಂತಿವೆ.
ಕೊರೊನಾ ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ಹಿಂದೆ ನಿರ್ಮಾಪಕರೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದು ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದರು.
ಆದ್ರೆ ಈ ಬಾರಿ ಒಂದೇ ದಿನ ಎರಡು ಬಿಗ್ ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಬರಲಿವೆ.
ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅಭಿನಯದ ‘ಸಲಗ’ ಒಂದೇ ದಿನ ಬಿಡುಗಡೆಯಾಗಲಿವೆ.
ಅಕ್ಟೋಬರ್ 14ರಂದು ‘ಸಲಗ’ ಮತ್ತು ‘ಕೋಟಿಗೊಬ್ಬ 3’ ಬಿಡುಗಡೆಯಾಗಲಿವೆ. ಇದರಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ ಶುರುವಾದಂತೆ ಆಗಿದೆ.









