ತಮಿಳುನಾಡಿನಲ್ಲಿ ಅಗಸ್ಟ್ 24 ರಿಂದ ಶಾಲಾ ಪ್ರವೇಶ ಪ್ರಕ್ರಿಯೆ ಪ್ರಾರಂಭ
ಚೆನ್ನೈ, ಅಗಸ್ಟ್ 17: ತಮಿಳುನಾಡಿನಲ್ಲಿ 1-10 ತರಗತಿಗಳಿಗೆ ಅಗಸ್ಟ್ 24 ಮತ್ತು 11 ಮತ್ತು 12 ನೇ ತರಗತಿಗಳಿಗೆ ಆಗಸ್ಟ್ 28 ರಿಂದ ಪ್ರವೇಶ ಪ್ರಾರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವ ಕೆ.ಎ.ಸೆಂಗೊಟ್ಟೈಯಾನ್ ತಿಳಿಸಿದ್ದಾರೆ.

1, 6 ಮತ್ತು 9 ನೇ ತರಗತಿಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಸೋಮವಾರ ಆದ್ಯತೆ ನೀಡಲಾಗಿದೆ ಮತ್ತು ಬೇರೆ ಶಾಲೆಗಳಿಗೆ ವರ್ಗಾಯಿಸಲು ಇಚ್ಛಿಸುವ ವಿದ್ಯಾರ್ಥಿಗಳು ಕೂಡ ಇದೇ ದಿನಾಂಕದಿಂದ ಪ್ರವೇಶ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಪ್ರಕ್ರಿಯೆಯ ಸಮಯದಲ್ಲಿ ಸಾಮೂಹಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ಶಿಕ್ಷಣ ಸಚಿವರು ಹೇಳಿದರು.

ಹೈಯರ್ ಸೆಕೆಂಡರಿ ಶಾಲೆಗೆ ಪ್ರವೇಶವು ಆಗಸ್ಟ್ 24 ರಿಂದ ಪ್ರಾರಂಭವಾಗಲಿದೆ. ಅದೇ ದಿನ ಪುಸ್ತಕಗಳನ್ನು ಮತ್ತು ಇತರ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಸೂಚಿಸಲಾಗಿದೆ.








