ಬಿಎಸ್ ವೈ ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ಮೌನಕ್ಕೆ ಜಾರಿದ್ರಾ ಕಟೀಲ್..?
ಬೆಂಗಳೂರು : ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ತಮ್ಮದೇ ಪಕ್ಷದ ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ಹೋಗಿದ್ದಾರಾ..? ಪಕ್ಷದ ರಾಜ್ಯಾಧ್ಯಕ್ಷರ ಮಾತಿಗೆ ಸರ್ಕಾರದಲ್ಲಿ ಕಿಮ್ಮತ್ತಿಲ್ವಾ..? ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಕಟೀಲ್ ಮೌನ ವಹಿಸಿದ್ದು ಯಾಕೆ..? ಸದ್ಯ ರಾಜಕೀಯ ವಲಯದಲ್ಲಿ ಗಿರಿಗಿಟ್ಟಲೇ ಹೊಡೆಯುತ್ತಿರುವ ಪ್ರಶ್ನೆಗಳಿವು.
ಹೌದು..! ಆರಂಭದಲ್ಲಿ ಫುಲ್ ಆಕ್ಟೀವ್ ಆಗಿದ್ದ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸದ್ಯ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುತ್ತಿದ್ದರೂ, ಕಟೀಲ್ ತುಟಿಬಿಚ್ಚುತ್ತಿಲ್ಲ. ಹಾಗಾದ್ರೆ ಕಟೀಲ್ ಮೌನಕ್ಕೆ ಶರಣಾಗಳು ಕಾರಣವೇನು..?
ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ರೋಸಿ ಹೋಗಿದ್ದಾರಾ ಕಟೀಲ್..?
ಮೇಲ್ನೋಟಕ್ಕೆ ನಾವೆಲ್ಲಾ ಒಂದೇ ಎನ್ನುತ್ತಿರುವ ಬಿಜೆಪಿ ನಾಯಕರಲ್ಲಿ ಮೊದಲಿನಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಹೀಗಾಗಿ ಸರ್ಕಾರ ಮತ್ತು ಕಟೀಲ್ ನಡುವೆ ಸಮನ್ವಯತೆ ಇಲ್ಲ. ಅದರಲ್ಲೂ ಬಿಎಸ್ ವೈ ನೇತೃತ್ವದ ಸರ್ಕಾರದಲ್ಲಿ ನಳೀನ್ ಕುಮಾರ್ ಅವರು ಸೈಡ್ ಲೇನ್ ಮಾಡಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರದಲ್ಲಿ ಯಾವುದೇ ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಪಕ್ಷದಲ್ಲಿ ಆ ವಿಷಯ ಚರ್ಚೆ ಆಗುತ್ತಿಲ್ಲ. ಇದು ಸಾಮಾನ್ಯವಾಗಿಯೇ ಪಕ್ಷದ ರಾಜ್ಯಾಧ್ಯಕ್ಷ ಕಟೀಲ್ ಗೆ ಬೇಸರ ತಂದಿದೆ.
ನಳೀನ್ ಕುಮಾರ್ ಮಾತನ್ನು ಯಾರು ಕೇಳ್ತಾ ಇಲ್ವಾ ?
ಸದ್ಯ ಕಟೀಲ್ ಸೈಲಂಟ್ ಆಗಿರಲು ಇದು ಕೂಡ ಒಂದು ಕಾರಣ. ಸರ್ಕಾರದಲ್ಲಿರುವ ಕೆಲ ಸಚಿವರು ಮೂಲ ಬಿಜೆಪಿಗರಲ್ಲ. ಹೀಗಾಗಿ ಕಟೀಲ್ ವಿಚಾರವಾಗಿ ಅವರು ತಲೆ ಕಡೆಸಿಕೊಳ್ಳುತ್ತಿಲ್ಲ. ಏಕೆಂದರೇ ಅವರಿಗೆ ಬಿಎಸ್ ವೈ ಮಾತ್ರ ಬಾಸ್..! ಈಗ ಕೋವಿಡ್ ನ ಎಲ್ಲಾ ಹಾಗೂಹೋಗುಗಳನ್ನೂ ವೈದ್ಯಕೀಯ ಶಿಕ್ಷಣ ಸಚಿವರೇ ನೋಡಿಕೊಳ್ಳುತ್ತಿದ್ದು, ಇಲ್ಲಿ ಕಟೀಲ್ ಮಾತು ಲೆಕ್ಕಕ್ಕಿಲ್ಲದಂತಾಗಿದೆ.
ಕೋವಿಡ್ ವಿಚಾರದಲ್ಲಿ ನಳೀನ್ ಕುಮಾರ್ ಯಾಕೆ ಆಕ್ಟೀವ್ ಆಗಿಲ್ಲ..?
ಬಿಜೆಪಿ ರಾಜ್ಯಾಧ್ಯಕ್ಷರಾದರೂ ತಮ್ಮದೇ ಸರ್ಕಾರದಿಂದ ಕಟೀಲ್ ಗೆ ಯಾವುದೇ ಸಹಕಾರ ಸಿಗುತ್ತಿಲ್ಲ. ಇದು ಕಟೀಲ್ ರ ಬಾಯಿ ಮತ್ತು ಕೈ ಕಟ್ಟಿಹಾಕಿದಂತೆ ಮಾಡಿದೆ. ಹೀಗಾಗಿಯೇ ಈ ಮೊದಲು ಫುಲ್ ಜೋಷ್ ನಲ್ಲಿ ಕಾಣುತ್ತಿದ್ದ ನಳೀನ್ ಕುಮಾರ್, ಈಗ ಫುಲ್ ಡಲ್ ಆಗಿದ್ದಾರೆ. ಮೊದಲಿನ ಚಾರ್ಮ್ ಅವರಲ್ಲಿ ಕಾಣಿಸುತ್ತಿಲ್ಲ.
ಮಂಗಳೂರಿಗೆ ಮಾತ್ರ ಸೀಮಿತವಾದ್ರಾ ?
ಇನ್ನೊಂದು ವಿಷಯ ಏನಂದರೇ ಸರ್ಕಾರದ ಕಾರ್ಯ ವೈಖರಿಯಿಂದ ಬೇಸತ್ತಿರುವ ಕಟೀಲ್ ಈಗ ಮಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ. ತಮಗೆ ತಾವೇ ಬೌಂಡರಿ ಹಾಕಿಕೊಂಡವರಂತೆ ವರ್ತಿಸುತ್ತಿರುವ ಕಟೀಲ್, ಕೋವಿಡ್ ವಿಚಾರವಾಗಿ ಪಕ್ಷದಿಂದ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದು ಸಾಮಾನ್ಯವಾಗಿಯೇ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.








