State Budget 2021 : ಬಜೆಟ್ ಮಂಡನೆ.. ಕಾಂಗ್ರೆಸ್ ಸಭಾತ್ಯಾಗ
ಬೆಂಗಳೂರು : ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಸ್ಪೀಕರ್ ಅವರು ಕಲಾಪ ಆರಂಭಿಸುತ್ತಿದ್ದಂತೆ ಸಿದ್ದರಾಮಯ್ಯ ಎದ್ದು ನಿಂತು ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸ್ಪೀಕರ್ ಅವರು ಬಜೆಟ್ ಮಂಡನೆ ವಿರೋಧಿಸುವುದು ಸರಿಯಲ್ಲ ಎಂದು ತಿಳಿ ಹೇಳುವ ಕೆಲಸ ಮಾಡಿದರು.
ಇತ್ತ ಸಿಎಂ ಬಜೆಟ್ ಮಂಡನೆ ಶುರು ಮಾಡಿದ್ರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ರು. ಹಾಗೆ ಸರ್ಕಾರದ ವಿರುದ್ಧ ಧಿಕ್ಕಾರಗಳ ಕೂಗುತ್ತಾ ಆಚೆ ನಡೆದರು.
ಬಳಿಕ ಸಿಎಂ ಬಜೆಟ್ ಮಂಡನೆ ಆರಂಭಿಸಿದ್ರು.