ರಾಜ್ಯ ಬಜೆಟ್ 2021 | ಬಜೆಟ್ ಗಾತ್ರ ಎಷ್ಟು..? ಯಾವುದಕ್ಕೆ ಒತ್ತು..?
ಬೆಂಗಳೂರು : ಆರ್ಥಿಕ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ರಾಜ್ಯ ಬಜೆಟ್ ಮಂಡಿಸಲಿದ್ದು, ಎಲ್ಲರ ಚಿತ್ತ ಬಿಎಸ್ ವೈ ಬಜೆಟ್ ನತ್ತ ನೆಟ್ಟಿದೆ. ಉಪಚುನಾವಣೆ ಮತ್ತು ವಿರೋಧ ಪಕ್ಷಗಳನ್ನು ಗಮನದಲ್ಲಿಟ್ಟುಕೊಂಡು ಬಿಎಸ್ ವೈ ಇಂದು ಜನಪ್ರಿಯ ಬಜೆಟ್ ಮಂಡನೆಗೆ ಒತ್ತು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನ ಸಿಎಂ ಇಂದು ಮಂಡಿಸಲಿರುವ ಬಜೆಟ್ ಒಟ್ಟು 2.40 ಲಕ್ಷ ಕೋಟಿ ಮೊತ್ತದ್ದಾಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರಲ್ಲಿ ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.
ಇದಲ್ಲದೆ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳಿವೆ. ಮುಖ್ಯವಾಗಿ ಬೆಂಗಳೂರು ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಧ್ನಾಹ್ನ 12 ಗಂಟೆಗೆ ಸಿಎಂ ಬಜೆಟ್ ಮಂಡಿಸಲಿದ್ದು, ಕೃಷಿ, ಪ್ರವಾಸೋದ್ಯಮದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಇದರ ಜೊತೆ ಜೊತೆಗೆ ನೀರಾವರಿ ಮತ್ತು ಸಹಕಾರ ಕ್ಷೇತ್ರಗಳಿಗೂ ಒಂದಿಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಲಾಗಿದೆ.