ಬಡವರ ಮಧ್ಯಮವರ್ಗದವರಿಗೆ ಬಿಗ್ ಶಾಕ್ : ತಿನ್ನುವ ಅನ್ನಕ್ಕೂ ಬಿತ್ತೂ ಕತ್ತರಿ..!
ಅನ್ನಬಾಗ್ಯ ಯೋಜನೆಯ ಸ್ವರೂಪವನ್ನೇ ಬದಲಾಯಿಸಲು ಹೊರಟಿರುವ ಸರ್ಕಾರ ಮಧ್ಯಮವರ್ಗದ ಜನ ಹಾಗೂ ಬಡ ಜನರಿಗೆ ಬಿಗ್ ಸಾಕ್ ನೀಡಿದೆ. ಅನ್ನಬಾಗ್ಯ ಯೋಜನೆಯಡಿ ನೀಡಲಾಗ್ತಿದ್ದ ಅಕ್ಕಿಗೆ ಕತ್ತರಿ ಹಾಕಿದೆ. ಹೌದು ಪ್ರತಿ ಸದಸ್ಯನಿಗೆ ಉಚಿತವಾಗಿ ಕೊಡುತಿದ್ದ 5 ಕೆಜಿ ಅಕ್ಕಿಗೆ ಕತ್ತರಿ ಬೀಳಲಿದೆ! ಪ್ರತಿ ತಿಂಗಳು ಫಲಾನುಭವಿಗಳಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿ ಹಾಗೂ ಗೋಧಿಗೆ 2-3 ರೂ. ದರ ನಿಗದಿ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆಯೇ ಅಕ್ಕಿ ಕಡಿತಗೊಳಿಸಿ ಹೊಸ ಧಾನ್ಯ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರದಿಂದ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ಪಡೆದಿದೆ.
ಏ.1ರಿಂದ ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ಜೋಳ, ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ನೀಡಲಾಗುತ್ತದೆ. ಇನ್ನು ದಕ್ಷಿಣ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಪಡಿತರ ಕಡಿತದಿಂದ ಪ್ರತಿ ವರ್ಷ ಸರ್ಕಾರಕ್ಕೆ 800 ಕೋಟಿ ರೂ. ಆರ್ಥಿಕ ಹೊರೆ ತಗ್ಗಲಿದೆ. ಉತ್ಪಾದನೆ ಕುಂಠಿತ ಹಾಗೂ ದರ ಏರಿಕೆ ಹಿನ್ನೆಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ತೊಗರಿಬೇಳೆಯನ್ನು ವಿತರಿಸಲೂ ಚಿಂತನೆ ನಡೆಯುತ್ತಿದೆ.
ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಅಷ್ಟಐಶ್ವರ್ಯ ನಿಮ್ಮ ಹಿಂದೆ ಸಾಲುಸಾಲಾಗಿ ಪ್ರಾಪ್ತಿಯಾಗುತ್ತದೆ..!!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








