ಬಳ್ಳಾರಿ : ರಾಜ್ಯದಲ್ಲಿ ನಿರೀಕ್ಷೆಗೆ ಮೀರಿ ನರೇಗಾ ಕೆಲಸ ಆಗುತ್ತಿದೆ. ಅಂತರ್ಜಲ ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ. ಬಳ್ಳಾರಿ ಜಿಲ್ಲೆಯಲ್ಲಿ 1 ಲಕ್ಷದ 33 ಸಾವಿರ ಜನ ಒಂದೇ ದಿನ ಕೆಲಸ ಮಾಡಿದ್ದಾರೆ ಅದು ಹೆಮ್ಮೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಅಂತರ್ಜಲ ಚೇತನ ಕಾರ್ಯಕ್ರಮ, ಕೃಷಿ ಹೊಂಡ, ಬೋರ್ವೇಲ್ , ಬಾವಿ ರೀಚಾರ್ಜ್ ಮಾಡೋದು, ಬದು ನಿರ್ಮಾಣ ಕಾರ್ಯಗಳು ಮಾಡಿದ್ದೇವೆ. ರೈತರಿಗೆ ಅನುಕೂಲಕ್ಕಾಗೋವಷ್ಟು ಕೆಲಸ ಮಾಡುತ್ತಿದೆ.
ರೈತರಿಗೆ ಎರಡು ಲಕ್ಷದಷ್ಟು ಹಣ ಸ್ವಯ: ಅಭಿವೃದ್ಧಿಗೆ ನೀಡಲಾಗುತ್ತಿದೆ. 100 ರಿಂದ 150 ದಿನ ಮಾನವ ದಿನಗಳಾಗುವ ಅವಕಾಶ ಇದೆ. 270 ಕ್ಕೆ ಕೂಲಿ ಏರಿಕೆ ಮಾಡಲಾಗಿದೆ. ಹಿಂದಿನ ಬಾಕಿ ಕೂಡ ಕ್ಲೀಯರ್ ಮಾಡಲಾಗಿದೆ. ಕೇಂದ್ರ ಸರ್ಕಾರ 1861 ಕೋಟಿ ಹಣ ರಾಜ್ಯಕ್ಕೆ ಬಿಡುಗಡೆ ಮಾಡಿದೆ.ಕೂಲಿ ಮಾಡಿದ 15 ದಿನಕ್ಕೆ ರೈತನ ಬ್ಯಾಂಕ್ ಅಕೌಂಟ್ ಗೆ ಹಣ ಬೀಳುತ್ತಿದೆ. 5% ಮಾತ್ರ ಅಂತರ್ಜಲ ನೀರು ಇದೆ. ನರೇಗಾದಡಿಯಲ್ಲಿ ಎಂಜನಿಯರ್ ಗಳು, ಪದವೀಧರರು ಕೆಲಸ ಮಾಡ್ತಿದ್ದಾರೆ-.ಕೊರೊನಾ ಸಮಯದಲ್ಲಿ ಸಹಾಯ ಕೂಡ ಮಾಡುತ್ತಿದ್ದಾರೆ.