ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹಾಗೂ ಸಿಎಂ ಅತಿಶಿ (Atishi) ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ.
ಬಿಜೆಪಿಯು ದೆಹಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಅಳಿಸಿದೆ ಎಂದು ಎಎಪಿ ನಾಯಕರು ಹಿಂದೆ ಆರೋಪಿಸಿದ್ದರು. ಅತಿಶಿ ಮತ್ತು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಬಿಜೆಪಿ ದೆಹಲಿಯ ಅಧಿಕೃತ ಪ್ರತಿನಿಧಿಯಾಗಿ ಬಬ್ಬರ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. “ಬಿಜೆಪಿ, ಕೇಂದ್ರ ಅಥವಾ ದೆಹಲಿ ಯಾವುದೇ ದೂರು ದಾಖಲಿಸಿಲ್ಲ. ” ಎಂದು ಅವರು ಹೇಳಿದ್ದಾರೆ.
ಅತಿಶಿ ಮತ್ತು ಕೇಜ್ರಿವಾಲ್ ರನ್ನು ಹೊರತುಪಡಿಸಿ, ಪ್ರಕರಣದಲ್ಲಿ ಇನ್ನು ಹಲವರ ಹೆಸರುಗಳಿವೆ. ಎಎಪಿ ನಾಯಕರ ವಿರುದ್ಧ ಬಬ್ಬರ್ ಅವರು ಪ್ರಕರಣ ದಾಖಲಿಸಿದ್ದು, 2018 ರಲ್ಲಿ ಪಕ್ಷವು ಸುದ್ದಿಗೋಷ್ಠಿ ನಡೆಸಿತ್ತು. ಅಲ್ಲಿ ಬಿಜೆಪಿಯ ಆದೇಶದ ಮೇರೆಗೆ ಭಾರತ ಚುನಾವಣಾ ಆಯೋಗವು ದೆಹಲಿಯ ಮತದಾರರ ಪಟ್ಟಿಯಿಂದ ಬನಿಯಾ, ಪೂರ್ವಾಂಚಲಿ ಮತ್ತು ಮುಸ್ಲಿಂ ಸಮುದಾಯದ ಸುಮಾರು 30 ಲಕ್ಷ ಮತದಾರರ ಹೆಸರನ್ನು ಅಳಿಸಿದೆ ಎಂದು ಆರೋಪಿಸಿತ್ತು ಎಂದಿದ್ದರು.