ಹೊಸ ಐಫೋನ್ 14 ಬಗ್ಗೆ ಅಪಹಾಸ್ಯ ಮಾಡಿದ ಸ್ಟೀವ್ ಜಾಬ್ಸ್ ಪುತ್ರಿ…
ಆಪಲ್ ಕಂಪನಿ ಇತ್ತೀಚೆಗೆ ಐಫೋನ್ 14 ಹೆಸರಿನ ಮಾಡೆಲ್ ಆನ್ನ ಬಿಡಗಡೆ ಮಾಡಿತ್ತು. ಐಫೋನ್ ಬಿಡುಗೆಡಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಮೀಮ್ ಗಳು ಓಡಾಡುತ್ತಿವೆ. ಅದರ ಬೆಲೆ, ಫೀಚರ್ಸ್, ಸಾಫ್ಟ್ ವೇರ್ ಕುರಿತಂತೆ ಹಲವು ವಿಷಯಗಳ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.
ಇದೀಗ ಆಪಲ್ ಸಂಸ್ಥಾಪಕ ಸ್ವೀವ್ ಜಾಬ್ಸ್ ಪುತ್ರಿ ಈವ್ ಜಾಬ್ಸ್ ಸ್ವತಃ ಐಪೋನ್ 14 ಅಪ್ಡೇಟ್ ಕುರಿತು ಕಿಡಿ ಕಾರಿದ್ದು, ಟ್ರೋಲ್ ಮಾಡಿದ್ದಾರೆ.
ಬಿಡುಗಡೆಯಾಗಿರುವ ಹೊಸ ಪೀಳಿಗೆಯ ಐಫೋನ್ಗಳ ಹೆಸರಲ್ಲಿ ಹಳೆಯ ವಿನ್ಯಾಸಗಳನ್ನೇ ಇಡಲಾಗಿದೆ ಎಂದು ಅರ್ಥಬರುವಂತಹ ಮೀಮ್ ಚಿತ್ರವೊಂದನ್ನ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಒಂದೇ ರೀತಿಯ ಶರ್ಟ್ ಧರಿಸಿ ಫೋಸ್ ಕೊಡುತ್ತಿರುವ ವ್ಯಕ್ತಿಯೊಬ್ಬರ ಮೀಮ್ ಹಂಚಿಕೊಂಡಿರುವ ಈವ್ ಜಾಬ್ಸ್ iPhone 13 ನಿಂದ iPhone 14 ಗೆ ಅಪ್ಗ್ರೇಡ್ ಮಾಡುತ್ತಿದ್ದೇನೆ” ಎಂದು ತಮ್ಮ Instagram ಸ್ಟೋರಿಯಲ್ಲಿ ಬರೆದಿದ್ದಾರೆ.








