ಬುದ್ಧಿ ಕಲಿಯದ `ಚೀಟರ್ ಸ್ಮಿತ್’ : ಪಂದ್ಯದಲ್ಲಿ ಸ್ಮಿತ್ ಮಾಡಿದ್ದೇನು ಗೊತ್ತಾ?
ಸಿಡ್ನಿ : ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿ ಮಾನ ಕಳೆದುಕೊಂಡಿದ್ದರೂ ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ನಾಯಕ ಸ್ಟೀವ್ ಸ್ಮಿತ್ ಇನ್ನೂ ಬುದ್ಧಿಕಲಿತಂತೆ ಕಾಣುತ್ತಿಲ್ಲ.
ಸಿಡ್ನಿ ಮೈದಾನದಲ್ಲಿ ಬ್ಯಾಟ್ಸ್ ಮನ್ ಮಾರ್ಕ್ ಅನ್ನು ಅಳಿಸುವ ಮೂಲಕ ಮತ್ತೆ ಕುತಂತ್ರವೆಸಗಿ ಸ್ಮಿತ್ ಸಿಕ್ಕಿಬಿದ್ದಿದ್ದಾನೆ. ಸದ್ಯ ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಚೀಟರ್ ಸ್ಮಿತ್ ಅಂತ ಟ್ರೆಂಡ್ ಆಗುತ್ತಿದೆ.
ಭಾರತ ಮತ್ತು ಆಸ್ಟ್ರೇಲಿಯಾದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಇದಕ್ಕೂ ಮುನ್ನ ಭಾರತ ಪಂದ್ಯದಲ್ಲಿ ಹಿನ್ನಡೆಯನ್ನ ಅನುಭವಿಸಿತ್ತು.
ರೋಹಿತ್ ಶರ್ಮಾ ಅರ್ಧ ಶತಕ, ಚೇತೇಶ್ವರ ಪೂಜಾರ ಅರ್ಧ ಶತಕ ಮತ್ತು ರಿಷಭ್ ಪಂತ್ ಅರ್ಧ ಶತಕದೊಂದಿಗೆ ಟೀಂ ಇಂಡಿಯಾ ಪಂದ್ಯ ಗೆಲ್ಲುವ ನಿರೀಕ್ಷೆ ಮೂಡಿತ್ತು.
After drinks break Aussie comes to shadow bat and scuffs out the batsmen's guard marks.
Rishabh Pant then returns and has to take guard again.#AUSvIND #AUSvsIND #AUSvINDtest pic.twitter.com/aDkcGKgUJC
— James Buttler | Cricket Badger Podcast 🏏🦡🇺🇦 (@cricket_badger) January 11, 2021
ಅದರಲ್ಲೂ ರಿಷಬ್ ಪಂತ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಸೋಲಿನ ಅಂಚಿನಿಂದ ಗೆಲುವಿನೆಡೆಗೆ ತಂಡವನ್ನು ಕೊಂಡೊಯ್ಯುತ್ತಿದ್ದರು.
ಈ ವೇಳೆ ರಿಷಭ್ ಪಂತ್ ಅವರನ್ನು ಬೇಗ ಔಟ್ ಮಾಡುವ ಉದ್ದೇಶದಿಂದಲೇ ಏನೋ, ಮೊದಲ ಸೆಶನ್ ಬಳಿಕ ಡ್ರಿಂಕ್ಸ್ ಬ್ರೇಕ್ ವೇಳೆ ಸ್ಮಿತ್ ಸ್ಟ್ರೈಕಿಂಗ್ ಪಾಯಿಂಟ್ ಬಳಿ ಬಂದು ಪಂತ್ ಹಾಕಿದ್ದ ಬ್ಯಾಟ್ಸ್ಮನ್ ಗೆರೆ ಅಳಿಸಿದ್ದಾರೆ.
ಉದ್ದೇಶ ಪೂರ್ವಕವಾಗಿಯೇ ಸ್ಮಿತ್ ಹೀಗೆ ಮಾಡಿದ್ದು, ಈ ಕೃತ್ಯ ಸ್ಟಂಪ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಮಿತ್ ಗೆರೆಯನ್ನು ಅಳಿಸಿದ ಬಳಿಕ ಕ್ರೀಸ್ ಗೆ ಬಂದ ಪಂತ್ ಮತ್ತೆ ಬ್ಯಾಟ್ಸ್ಮನ್ ಲೈನ್ ಎಳೆಯಲು ಮುಂದಾಗಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಬಳಿಕ ಪಂತ್ ನೇಥನ್ ಲಿಯಾನ್ ಎಸೆತಕ್ಕೆ ಪ್ಯಾಟ್ ಕಮಿನ್ಸ್ಗೆ ಕ್ಯಾಚ್ ನೀಡಿ ಔಟ್ ಆದರು.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಚೀಟರ್ ಸ್ಮಿತ್ ಟ್ರೆಂಡ್ ಆಗುತ್ತಿದೆ. ಸ್ಮಿತ್ ವಿರುದ್ಧ ಕ್ರಮಕ್ಕೆ ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









