ಒಂದೇ ಪದದಲ್ಲಿ ಸ್ಟೀವ್ ಸ್ಮಿತ್ ಪ್ರಕಾರ ವಿರಾಟ್ ಕೊಹ್ಲಿ ಅಂದ್ರೆ… ತಿಕ್ಕಲು/ವಿಚಿತ್ರ…!
ಆಸ್ಟ್ರೇಲಿಯಾದ ಸೂಪರ್ ಸ್ಟಾರ್ ಸ್ಟೀವ್ ಸ್ಮಿತ್ ಮತ್ತು ಟೀಮ್ ಇಂಡಿಯಾದ ಚೇಸಿಂಗ್ ಗಾಡ್ ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್‍ನ ಎರಡು ಕಣ್ಣುಗಳು ಇದ್ದಂಗೆ. ಆಧುನಿಕ ಕ್ರಿಕೆಟ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ವಿರಾಟ್ ಮತ್ತು ಸ್ಟೀವ್ ಸ್ಮಿತ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದೆ. ಯಾರು ಶ್ರೇಷ್ಠರು ಅಂತ ಒಬ್ಬರನ್ನೊಬ್ಬರ ನಡುವೆ ಹೋಲಿಕೆಗಳನ್ನು ಮಾಡಲಾಗುತ್ತಿದೆ.
ನೀವು ನೋಡಿರಬಹುದು.. ಅಥವಾ ಕೇಳಿರಬಹುದು.. ವಿಶ್ವ ಫುಟ್ ಬಾಲ್‍ನಲ್ಲೂ ಇದೇ ರೀತಿಯ ಸ್ಪರ್ಧೆ ನಡೆಯುತ್ತಿದೆ. ಅರ್ಜೆಂಟೀನಾದ ಲಿಯೋನಾಲ್ ಮೆಸ್ಟಿ ಮತ್ತು ಪೊರ್ಚ್‍ಗಲ್‍ನ ಕ್ರಿಸ್ಟಿಯಾನೋ ರೋನಾಲ್ಡೊ
ನಡುವೆಯೂ ಇದೇ ರೀತಿಯ ಪೈಪೋಟಿ, ಸ್ಪರ್ಧೆ, ಹೋಲಿಕೆಗಳು ನಡೆಯುತ್ತಿವೆ. ಆದ್ರೆ ಇದು ಕ್ರೀಡಾ ವಲಯದಲ್ಲಿ ಮಾತ್ರ. ಮೈದಾನದಿಂದ ಹೊರಗಡೆ ಎಲ್ಲರೂ ಸ್ನೇಹಿತರೇ.
ಹಾಗೇ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಉತ್ತಮ ಬಾಂಧವ್ಯವಿದೆ. ಹಾಗೇ ಸಲುಗೆಯೂ ಇದೆ. ಪರಸ್ಪರ ಗೌರವವೂ ಇದೆ. ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಗುಣವೂ ಇದೆ. ಬಹುಶಃ ಈ ಕಾರಣದಿಂದಲೇ ಸ್ಟೀವನ್ ಸ್ಮಿತ್ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ವಿರಾಟ್‍ಗೆ ಈ ರೀತಿ ಉತ್ತರ ನೀಡಿರೋದು ಅಂತ ಕಾಣುತ್ತೆ
ಅಭಿಮಾನಿಯೊಬ್ಬ ಸ್ಟೀವ್ ಸ್ಮಿತ್ ಅವರಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಪ್ರಶ್ನೆಯೊಂದು ಕೇಳಿದ್ದ. ಒಂದೇ ಪದದಲ್ಲಿ ವಿರಾಟ್ ಕೊಹ್ಲಿ ಅಂದ್ರೆ ಏನು ಅಂತ. ಅದಕ್ಕೆ ಸ್ಟೀವ್ ಸ್ಮಿತ್ ಫ್ರೀಕ್ ಅಂತ ಉತ್ತರ ನೀಡಿದ್ದಾರೆ. ಫ್ರೀಕ್ ಅಂದ್ರೆ ತಿಕ್ಕಲು ಅಂತನೂ
ಆಗುತ್ತೆ. ವಿಚಿತ್ರ ಅಂತನೂ ಹೇಳಬಹುದು. ಹುಚ್ಚಾಟಿಕೆ ಅಂತನೂ ತಿಳಿಯಬಹುದಾಗಿದೆ.
ಇನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಬಗ್ಗೆ ಕೇಳಿದಾಗ ಸ್ಟೀವ್ ಸ್ಮಿತ್ ಲೆಜೆಂಡ್.. ಮಿಸ್ಟರ್ ಕೂಲ್ ಅಂತ ಬಣ್ಣಿಸಿದ್ದಾರೆ. ಹಾಗೇ ಇನ್ನೊಬ್ಬ ಅಭಿಮಾನಿಯ ನೇರ ಪ್ರಶ್ನೆಗೆ ಖಡಕ್ ಆಗಿ, ತಮಾಷೆಯಾಗಿ ಹೇಳಿದ್ದಾರೆ. ಬ್ಯಾಟಿಂಗ್ ಮಾಡಲು ನಿಮ್ಮ ನೆಚ್ಚಿನ ಆಟಗಾರ ಯಾರು ಅನ್ನೋ ಪ್ರಶ್ನೆಗೆ ನೀನೂ ಅಂತು ಅಲ್ಲ ಅಂತ ಸ್ಟೀವ್ ಸ್ಮಿತ್ ಹೇಳಿದ್ದಾರೆ.








