2019 ವಿಶ್ವಕಪ್: ಸೂಪರ್ ಓವರ್ ಗಿಂತ ಮುನ್ನ ಸಿಗರೇಟ್ ಸೇದಿದ್ದ ಬೆನ್ ಸ್ಟೋಕ್ಸ್ …!
2019ರ ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಬೆನ್ ಸ್ಟೋಕ್ಸ್… ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ರೋಮಾಂಚಕಾರಿಯಾಗಿ ಅಂತ್ಯಕಂಡ ಪಂದ್ಯ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳನ್ನು ಕಟ್ಟಕಡೆಯ ತನಕ ತುದಿಗಾಲಿನಲ್ಲಿ ನಿಲ್ಲಿಸಿದ್ದಂತಹ ಫೈನಲ್ ಪಂದ್ಯ. ಯಾಕಂದ್ರೆ ನಿಗದಿತ 50 ಓವರ್‍ಗಳ ಪಂದ್ಯದಲ್ಲೂ ಪಂದ್ಯ ಟೈ ಆಗಿತ್ತು. ಹಾಗೇ ಸೂಪರ್ ಓವರ್‍ನಲ್ಲೂ ಪಂದ್ಯ ಟೈ ಅಗಿತ್ತು. ಕೊನೆಗೆ ಪಂದ್ಯದಲ್ಲಿ ಗರಿಷ್ಠ ಬೌಂಡರಿ ದಾಖಲಿಸಿದ್ದ ಆಧಾರದಲ್ಲಿ ಗೆಲುವನ್ನು ಘೋಷಣೆ ಮಾಡಲಾಗಿತ್ತು. ಹೀಗಾಗಿ ಕ್ರಿಕೆಟ್ ಜನಕರು ಮೊದಲ ಬಾರಿ ವಿಶ್ವ ಚಾಂಪಿಯನ್ನರಾಗಿ ಹೊರಹೊಮ್ಮಿದ್ರು.
ಇಲ್ಲಿ ನ್ಯೂಜಿಲೆಂಡ್ ನತದೃಷ್ಟ ತಂಡವಾಗಿ ಹೋಯ್ತು. ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ರೂ ಜಯವನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ರಿಕೆಟ್ ಜಗತ್ತು ಕೂಡ ನ್ಯೂಜಿಲೆಂಡ್ ತಂಡದ ಪರಿಸ್ಥಿತಿಯನ್ನು ನೋಡಿ ಬೇಸರ ವ್ಯಕ್ತಪಡಿಸಿತ್ತು. ಆದ್ರೆ ನ್ಯೂಜಿಲೆಂಡ್ ತಂಡದಿಂದ ಗೆಲುವನ್ನು ಕಸಿದುಕೊಂಡಿದ್ದು ಆಲ್ ರೌಂಡರ್ ಬೆನ್ ಸ್ಟೋಕ್ಸ್.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಬೆನ್ ಸ್ಟೋಕ್ಸ್ ಅವರು ಸುಮಾರು 2 ಗಂಟೆ 27 ನಿಮಿಷಗಳ ಕಾಲ ಮೈದಾನದಲ್ಲಿ ಹೋರಾಟ ಮಾಡಿದ್ದರು. ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ವೈಖರಿ ಅಷ್ಟು ಸುಲಭವಾಗಿ ಮರೆಯುವಂತಹುದ್ದಲ್ಲ. 98 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‍ಗಳನ್ನು ಸಿಡಿಸಿ ಅಜೇಯ 84 ರನ್ ದಾಖಲಿಸಿದ್ದರು. ಅಲ್ಲದೆ ನ್ಯೂಜಿಲೆಂಡ್ ಕೈಯಿಂದ ವಿಶ್ವಕಪ್ ಟ್ರೋಫಿಯನ್ನು ಕೂಡ ಕಸಿದುಕೊಂಡಿದ್ದರು. ಪಂದ್ಯವನ್ನು ಟೈ ಮಾಡಿಕೊಳ್ಳುವಂತೆ ಮಾಡಿದ್ದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಕ್ರಿಕೆಟ್‍ನ ಹೀರೋ ಆದ್ರು.
ಆದ್ರೆ ಬೆನ್ ಸ್ಟೋಕ್ಸ್ ಅವರು ಸಾಕಷ್ಟು ಒತ್ತಡದಲ್ಲಿದ್ದರು. ಬೆವರಿನಿಂದ ಅವರು ಒದ್ದೆಯಾಗಿದ್ದರು. ಪಂದ್ಯ ಟೈಗೊಂಡಿರುವುದರಿಂದ ಇಂಗ್ಲೆಂಡ್ ತಂಡದ ಡ್ರೆಸಿಂಗ್ ರೂಂ ಸೂಪರ್ ಓವರ್ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿತ್ತು. ನಾಯಕ ಇಯಾನ್ ಮೊರ್ಗಾನ್ ಸೂಪರ್ ಓವರ್‍ಗೆ ರಣ ತಂತ್ರ ಮಾಡುತ್ತಿದ್ದರು. ಆದ್ರೆ ಬೆನ್ ಸ್ಟೋಕ್ಸ್ ಸೀದಾ ಹೋಗಿದ್ದು ಬಾತ್ ರೂಂಗೆ. ಅಲ್ಲಿ ಹೋಗಿ ತನ್ನ ಒತ್ತಡವನ್ನು ನಿವಾರಣೆ ಮಾಡಲು ಸಿಗರೇಟ್ ಸೇದಿದ್ದರು. ಈ ವಿಚಾರ ಈಗ ಬಹಿರಂಗಗೊಂಡಿದೆ.
ಬೆನ್ ಸ್ಟೋಕ್ಸ್ ಒತ್ತಡವನ್ನು ಕಡಿಮೆ ಮಾಡಲು ಸಿಗರೇಟ್ ಸೇದಿದ್ದರು. ಲಾಡ್ರ್ಸ್ ಅಂಗಣದಲ್ಲಿ ಬೆನ್ ಸ್ಟೋಕ್ಸ್‍ಗೆ ಸಿಗರೇಟ್ ಸೇದುವ ಜಾಗವನ್ನು ಯಾರು ಹೇಳಬೇಕಾಗಿಲ್ಲ. ಯಾಕಂದ್ರೆ ಬೆನ್ ಸ್ಟೋಕ್ಸ್‍ಗೆ ಲಾಡ್ರ್ಸ್ ಮೈದಾನದ ಮೂಲೆ ಮೂಲೆಯೂ ಗೊತ್ತು. ಅಲ್ಲಿ ಅವರು ಸಾಕಷ್ಟು ಪಂದ್ಯಗಳನ್ನು ಆಡಿದ್ದರು. ತನ್ನ ಮೇಲಿದ್ದ ಒತ್ತಡವನ್ನೆಲ್ಲಾ ಸಿಗರೇಟ್ ಮೂಲಕ ಕಡಿಮೆ ಮಾಡಿಕೊಂಡು ಸೂಪರ್ ಓವರ್ ನಲ್ಲೂ ಅಮೂಲ್ಯ ಎಂಟು ರನ್ ಸಿಡಿಸಿದ್ರು.
ಇಂಗ್ಲೆಂಡ್ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ಬಗ್ಗೆ ಈಗ ಒಂದು ಪುಸ್ತಕ ಕೂಡ ಪ್ರಕಟಗೊಂಡಿದೆ. ಮೊರ್ಗಾನ್ಸ್ ಮೆನ್.. ದಿ ಇನ್ ಸೈಡ್ ಸ್ಟೋರಿ ಆಫ್ ಇಂಗ್ಲೆಂಡ್ಸ್ ರೈಸ್ ಫ್ರಮ್ ಕ್ರಿಕೆಟ್ ವಲ್ರ್ಡ್ ಕಪ್ ಹ್ಯೂಮಿಲಿಯೇಷನ್ ಟು ಗ್ಲೋ ಅನ್ನೋ ಪುಸ್ತಕದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ.