ಆರ್ಡರ್ ಮಾಡಿದ್ದು ಕಕಮ್ಯೂನಿಷ್ಟ್ ಮ್ಯಾನಿಫೇಸ್ಟೋ, ಡೆಲಿವರಿ ಆಗಿದ್ದು ಭಗವದ್ಗೀತೆ : ಅಮೆಜಾನ್ ನಲ್ಲಿ ವಿಚಿತ್ರ ಘಟನೆ
ಕೊಲ್ಕತ್ತಾ : ದೇಶದ ಅತಿ ದೊಡ್ಡ ಆನ್ ಲೈನ್ ಶಾಪಿಂಗ್ ಕಂಪನಿ ಅಮೆಜಾನ್ ನಲ್ಲಿ ಐಟಂ ಆರ್ಡರ್ ಮಾಡಿದ ವ್ಯಕ್ತಿ ಶಾಕ್ ಆಗಿದೆ. ಅಮೆಜಾನ್ ನಲ್ಲಿ ಆರ್ಡರ್ ಮಾಡಿದ ವಸ್ತುವೇ ಬೇರೆ ಡೆಲಿವರಿ ಆಗಿರುವ ಐಟಂ ಬೇರೆ. ಇದರಿಂದ ಆರ್ಡರ್ ಮಾಡಿದ ವ್ಯಕ್ತಿಗೆ ಶಾಕ್ ಆಗಿದೆ.
ಕೊಲ್ಕತ್ತಾದ ಸುದೀರ್ಥೋ ದಾಸ್ ಎಂಬುವವರು ಅಮೆಜಾನ್ ನಲ್ಲಿ ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ಪುಸ್ತಕವನ್ನು ಆನ್ ಲೈನ್ ಮೂಲಕ ಬುಕ್ ಮಾಡಿದ್ದರು. ಆದರೆ ಬುಕ್ ಮಾಡಿದವರಿಗೆ ಡೆಲಿವೆರಿ ಆಗಿದ್ದು ಮಾತ್ರ ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆ. ಈ ಘಟನೆಯನ್ನು ಸುದೀರ್ಥೋ ದಾಸ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅಮೆಜಾನ್ ನ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.








