ಕಿಡಿಗೇಡಿಗಳು ಬೀದಿ ನಾಯಿಯನ್ನು ಥಳಿಸಿ ಆಸಿಡ್ ಹಾಕಲು ಯತ್ನಿಸಿರುವ ಮತ್ತೊಂದು ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಉದ್ಯಮಿ ಮೊಮ್ಮಗನೊಬ್ಬ ಇತ್ತೀಚೆಗೆ ಬೀದಿ ನಾಯಿಯ ಮೇಲೆ ಬೇಕಂತ ಕಾರು ಹತ್ತಿಸಿ ಕೊಲೆ ಮಾಡಿದ್ದ..
ಇದೀಗ ಬೀದಿ ನಾಯಿಯ ಮೇಲೆ ಮತ್ತೊಂದು ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ.. ಬೀದಿ ನಾಯಿ ಕಟ್ಟಿ ಹಾಕಿ ಕಿಡಿಗೇಡಿಗಳು ಥಳಿಸಿದ್ದೂ ಅಲ್ಲದೇ ಅದನ್ನ ಬಿಡಿಸಲು ಹೋದವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ.
ಮಾ.4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ.. ಈ ಘಟನೆಯನ್ನು ಪ್ರಶ್ನಿಸಿದ ಸಫಿಯಾ ಎಂಬ ಮಹಿಳೆ ಮೇಲೆ ಹಲ್ಲೆಗೆ ಯಮತ್ನಿಸಿದ್ದಾರೆ..
ಮಹಿಳೆ ದೂರಿನನ್ವಯ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ… ಬೆದರಿಕೆ ಹಾಕಿದ್ದಾರೆಂದು ಬನಶಂಕರಿ ಪೊಲೀಸ್ ಠಾಣೆಗೆ ದೂರು ಮಹಿಳೆ ನೀಡಿದ್ದಾರೆ..
ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.









