ಕೋರ್ಟ್ ಆದೇಶ ಪಾಲಿಸದಿದ್ರೆ ಕಟ್ಟು ನಿಟ್ಟಿನ ಕ್ರಮ – ಗೃಹ ಸಚಿವ ಅರಗ ಜ್ಞಾನೇಂದ್ರ…
ಮಸಿದಿಗಳಲ್ಲಿನ ಮೈಕ್ ತೆರವಿಗೆ ಆಗ್ರಹಿಸಿ ಆಜಾನ್ ವಿರುದ್ಧ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ, ಮಂತ್ರಪಠಣಗಳು ಇಂದಿನಿಂದ ಆರಂಭವಾಗಿದೆ. ಈ ಸಂಬಂಧ ಶಬ್ದಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೋರ್ಟ್ ಆದೇಶ ಪಾಲಿಸದಿದ್ದರೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಅಜಾನ್ಗೆ ಪರ್ಯಾಯವಾಗಿ ಇಂದಿನಿಂದ ಸುಪ್ರಭಾತ ಅಭಿಯಾನವನ್ನ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಮೈಕ್ ಮೂಲಕ ಪಠಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಆದ್ರೆ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡುತ್ತಿಲ್ಲ ಹೀಗೆ ಮುಂದುವರೆದ್ರೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಮೇಲೆ ದೂರು ದಾಖಲಿಸಲಾಗುವುದು, ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿಲ್ಲ ಎಂದು ದೂರು ದಾಖಲು ಮಾಡುತ್ತೇವೆ ಎಂದು ಮೈಸೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಕಾನೂನನ್ನ ಕೈಗೆ ತೆಗೆದುಕೊಳ್ಳುವವರ ವಿರುದ್ಧ ಪೊಲೀಸರು ನೋಟಿಸ್ ಕೊಡ್ತಾರೆ, ಕ್ರಮ ತೆಗೆದುಕೊಳ್ತಾರೆ. ಯಾರು ಕೇಳುವುದಿಲ್ಲವೋ ಅವರ ವಿರುದ್ಧ ಕ್ರಮ ಶಿಸ್ತು ಫಿಕ್ಸ್ ಎಂದು ಶಿವಮೊಗ್ಗದಲ್ಲಿ ನಿನ್ನೆ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಮೈಕ್ ಬಳಕೆ ಬಗ್ಗೆ ಅನೇಕ ಕೋರ್ಟ್ ಆದೇಶಗಳಿವೆ ಕೋರ್ಟ್ ಆದೇಶದ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.