ತಿರುವನಂತಪುರಂನಲ್ಲಿ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್
ತಿರುವನಂತಪುರಂ ಜುಲೈ 25: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ ತಿರುವನಂತಪುರಂ ಸಂಪೂರ್ಣ ಲಾಕ್ ಡೌನ್ ಆಗಿದೆ.
ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರವು ಸಂಪೂರ್ಣ ಲಾಕ್ಡೌನ್ ಆಗಿದ್ದರಿಂದ ತಿರುವನಂತಪುರಂನ ಬೀದಿಗಳು ಶನಿವಾರ ನಿರ್ಜನವಾಗಿ ಕಾಣಿಸಿತು.
ತಿರುವನಂತಪುರಂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನಲೆಯಲ್ಲಿ ಜುಲೈ 18ರಿಂದ ಲಾಕ್ ಡೌನ್ ಗೆ ಆದೇಶಿಸಿದೆ. ಜುಲೈ 28 ರ ಮಧ್ಯರಾತ್ರಿಯವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ತಿರುವನಂತಪುರಂ ಮಹಾನಗರ ಪಾಲಿಕೆಯ ಏಳು ಕೌನ್ಸಿಲರ್ಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಮೇಯರ್ ಕೆ.ಶ್ರೀಕುಮಾರ್ ಅವರು ಶುಕ್ರವಾರ ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕೇರಳದಲ್ಲಿ ಈಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 16,995 ಆಗಿದೆ.ಈ ಪೈಕಿ 9,379 ಸಕ್ರಿಯ ಪ್ರಕರಣಗಳಿದ್ದು, 7,562 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈವರೆಗೆ ರಾಜ್ಯದಿಂದ 54 ಸಾವುಗಳು ವರದಿಯಾಗಿವೆ.