100 ಅಂಕಗಳಿಗೆ 555 ಅಂಕನೀಡಿ ಯಡವಟ್ಟು ಮಾಡಿದ ಬಿಹಾರ ವಿಶ್ವವಿದ್ಯಾನಿಲಯ….
ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯ ಶನಿವಾರ ಗ್ರ್ಯಾಜುಯೇಟ್ ಆರ್ಟ್ಸ್ ವಿಭಾಗದ ಫಲಿತಾಂಶವನ್ನು ಪ್ರಕಟಿಸಿದ್ದು, ವಿದ್ಯಾರ್ಥಿಯೊಬ್ಬ 100ಕ್ಕೆ 555 ಅಂಕಗಳನ್ನು ಪಡೆದಿದ್ದಾನೆ. ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗವು ತಪ್ಪನ್ನು ಒಪ್ಪಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟಿಸುವ ಒತ್ತಡದಿಂದ ಇದು ಸಂಭವಿಸಿದೆ ಎಂದು ಹೇಳಿದೆ.
ಜಮುಯಿಯ ಕೆಕೆಎಂ ಕಾಲೇಜಿನ ವಿದ್ಯಾರ್ಥಿ ದಿಲೀಪ್ ಕುಮಾರ್ ಷಾ ಅವರು ಒಟ್ಟು 100 ಅಂಕಗಳಿಗೆ 555 ಅಂಕಗಳನ್ನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಯ ಒಟ್ಟಾರೆ ಪರ್ಸೆಂಟೇಜ್ 108.5%. ಮತ್ತೊಂದೆಡೆ ಬಾರ್ಹಿಯಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸಂಧ್ಯಾ ಕುಮಾರಿ ಎಲ್ಲಾ ವಿಷಯಗಳಲ್ಲಿ ತೇರ್ಗಡೆಯಾಗಿದ್ದರೂ ಅಂತಿಮ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದಾರೆ.
ಈ ಎಲ್ಲಾ ದೋಷಗಳು ಮಾಲ್ಯಮಾಪಕರು, ಮತ್ತು ಪರಿವಿಕ್ಷಕರ ಇಬ್ಬರ ಸಹಿಯ ನಂತರವೂ ಹೊರಬಂದಿವೆ. ಅಂದರೆ ಫಲಿತಾಂಶವನ್ನು ಎರಡು ಬಾರಿ ಪರಿಶೀಲಿಸಿದ ನಂತರವೂ ತಪ್ಪುಗಳು ಕಂಡು ಬಂದಿವೆ. ಪರೀಕ್ಷಾ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಕೊಂಡಿವೆ.
ಮುಂಗೇರ್ ವಿಶ್ವವಿದ್ಯಾನಿಲಯದ ಪರೀಕ್ಷಾ ನಿಯಂತ್ರಕ ಡಾ.ರಾಮಶಿಶ್ ಪುರ್ವೆ ಅವರು ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಎಲ್ಲಾ ಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಮತ್ತು ತನಿಖೆ ಪೂರ್ಣಗೊಂಡ ನಂತರವೇ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಫಲಿತಾಂಶಗಳಲ್ಲಿ ಮರುಪರಿಶೀಲನೆಯನ್ನು ಬಯಸುವ ಎಲ್ಲಾ ವಿದ್ಯಾರ್ಥಿಗಳು ಮೇ 10 ರೊಳಗೆ ತಮ್ಮ ಕಾಲೇಜು ಪ್ರಾಂಶುಪಾಲರಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು. ಎಲ್ಲಾ ಕಾಲೇಜುಗಳಿಗೆ ಅದರ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.