ಹಿಜಾಬ್ – ಕೇಸರಿ ಶಾಲು ತೆಗೆದು ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳು Saaksha Tv
ಬಾಗಲಕೋಟೆ: ವಿದ್ಯಾರ್ಥಿಗಳು ಹಿಜಾಬ್ ಹಾಗೂ ಕೇಸರಿ ಶಾಲನ್ನು ತೆಗೆದು ತರಗತಿಗಳಿಗೆ ಹಾಜರಾಗುವ ಮೂಲಕ ಬಾಗಲಕೋಟೆಯ ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಹಿಜಾಬ್ – ಕೇಸರಿ ಶಾಲು ಧಾರಣೆ ವಿವಾದ ರಾಜ್ಯದ ಕೆಲವು ಕಾಲೇಜುಗಳಲ್ಲಿ ಹಿಸಂಸಾತ್ಮಕ ಕೃತ್ಯಕ್ಕೆ ಕಾರಣವಾಗಿದೆ. ಆದರೆ ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಮಾತಿಗೆ ಬೆಲೆ ನೀಡಿ ಹಿಜಾಬ್ ಹಾಗೂ ಕೇಸರಿ ತೆಗೆದು ಹಾಕಿ ಕಾಲೇಜಿನ ಒಳಗೆ ಪ್ರವೇಶ ಮಾಡುವ ಮೂಲಕ ರಾಜ್ಯದಲ್ಲಿಯೇ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.
ಕಾಲೇಜಿನಲ್ಲಿ ತರಗತಿ ಪ್ರಾರಂಭ ಆಗುತ್ತಿದ್ದ ಸಮಯದಲ್ಲಿ ಕೆಲ ಸಂಘಟನೆ ಮೂಲಕ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದರು. ಅದೇ ರೀತಿ ಹಿಜಾಬ್ ಧರಿಸಿ ಕೆಲವರು ಬಂದರು. ಆಗ ವಿದ್ಯಾರ್ಥಿಗಳನ್ನು ಕಾಲೇಜಿನ ಗೇಟ್ ಬಳಿ ತಡೆ ಹಿಡಿಯಲಾಯಿತು. ನಂತರ ಪ್ರಾಧ್ಯಾಪಕರೊಬ್ಬರು ಗೇಟ್ ಬಳಿ ಆಗಮಿಸಿ, ವಿದ್ಯಾರ್ಥಿಗಳಿಗೆ ಈ ವಿವಾದದಿಂದಾಗಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದೀರಿ. ಇಂತಹ ಎಲ್ಲಾ ಆಲೋಚನೆ ಬಿಟ್ಟು ಪರೀಕ್ಷೆಗೆ ತಯಾರಾಗಿ, ಅಭ್ಯಾಸಕ್ಕೆ ಮಹತ್ವ ನೀಡಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು.
ಆಗ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆಯಲು ಒಪ್ಪಿ ಬ್ಯಾಗ್ನಲ್ಲಿಟ್ಟುಕೊಂಡು ತರಗತಿಗೆ ಹೋಗಲು ಸಿದ್ದರಾದರು. ಅದೇ ರೀತಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಕ್ಲಾಸ್ಗೆ ನಡೆದರು. ನಂತರ ಯತಾ ಪ್ರಕಾರ ತರಗತಿಗಳು ಪ್ರಾರಂಭವಾದವು. ಈ ಮೂಲಕ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಯಿತು.