Uttarakhand – ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸುವ ವಿದ್ಯಾರ್ಥಿನೀಯರು ( ವಿಡಿಯೋ)
ಉತ್ತರಾಖಂಡ ರಾಜ್ಯದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಬಾಗೇಶ್ವರ ಜಿಲ್ಲೆಯ ರೈಖೋಲಿ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಕಿರುಚುತ್ತಾ, ಅಳುತ್ತಾ, ನೆಲದ ಮೇಲೆ ಉರುಳುತ್ತಾ ವಿಚಿತ್ರವಾಗಿ ವರ್ತಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ ಹಾಗೂ ಶಾಲೆಗೆ ಭೇಟಿ ನೀಡಿದ ವೈದ್ಯರ ತಂಡವನ್ನ ಬೆಚ್ಚಿ ಬೀಳಿಸಿದೆ. ಪಕ್ಕದ ಜಿಲ್ಲೆಗಳಾದ ಅಲ್ಮೋರಾ, ಪಿಥೋರಗಢ್ ಮತ್ತು ಚಮೋಲಿಯ ಸರ್ಕಾರಿ ಶಾಲೆಗಳಲ್ಲಿ ಇದೇ ರೀತಿಯ ಮಾಸ್ ಹಿಸ್ಟೀರಿಯಾದ ಘಟನೆಗಳು ನಡೆದಿವೆ. ಸ್ಥಳಿಯರು ಇದನ್ನ ದೆವ್ವದ ಮೇಲೆ ಬಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಮಂಗಳವಾರ ಮೊದಲ ಬಾರಿಗೆ ವರದಿಯಾಗಿತ್ತು. ಗುರುವಾರ ಮತ್ತೆ ಅಂತಹದ್ದೇ ಘಟನೆ ಮರುಕಳಿಸಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ದೇವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಅಳುವುದು, ಕಿರುಚುವುದು ಮಾಡಿದ್ದಾರೆ. ವಿನಾಕಾರಣ ತಲೆಗೆ ಹೊಡೆದುಕೊಳ್ಳಲು ಯತ್ನಿಸಿದ್ದಾರೆ. ಪೋಷಕರನ್ನು ಕರೆಸಿ ಮಾಹಿತಿ ನೀಡಿದ್ದೇವೆ ಎಂದು ಶಿಕ್ಷಕರು ಹೇಳಿದ್ದಾರೆ. ಅಂತೆಯೇ.. ಸ್ಥಳೀಯ ಅರ್ಚಕರನ್ನು ಕರೆಸಲಾಯಿತು. ಅರ್ಚಕರು ವಿದ್ಯಾರ್ಥಿಗಳ ಮೇಲೆ ಸ್ವಲ್ಪ ಪವಿತ್ರ ನೀರನ್ನ ಸಿಂಪಡಿಸಿದ್ದಾರೆ. ಕೆಲ ಗಂಟೆಗಳ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ವಿಮಲಾ ದೇವಿ ಎಂಬ ಶಿಕ್ಷಕಿ ತಿಳಿಸಿದ್ದಾರೆ.








