ವಿದ್ಯಾರ್ಥಿಗಳ ಗಮನಿಸಿ : ಜುಲೈ 1ರಿಂದ ಶಾಲೆಗಳು ಆರಂಭ
ಬೆಂಗಳೂರು : ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭಿಸುವ ಬಗ್ಗೆ ಇದ್ದ ಗೊಂದಲಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೆರೆ ಎಳೆದಿದ್ದಾರೆ. ಜುಲೈ 1ರಿಂದ ಶಾಲೆಗಳು ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಜೂನ್ 15ರಿಂದ ದಾಖಲಾತಿ ಆರಂಭಗೊಳ್ಳಲಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು. ಕೋವಿಡ್ ಪರಿಸ್ಥಿತಿ ಗಮನಿಸಿ, ಆನ್‍ಲೈನ್ ಅಥವಾ ಭೌತಿಕ ತರಗತಿಗಳನ್ನು ನಡೆಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪೋಷಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಇತ್ತ ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈ ವರ್ಷ ಜುಲೈ 1ರಿಂದ ಅಕ್ಟೋಬರ್ 10ರವರೆಗೆ ಮೊದಲ ಅವಧಿ ಹಾಗೂ ಅಕ್ಟೋಬರ್ 21, ಏಪ್ರಿಲ್ 31, 2022ರವರೆಗೆ ಎರಡನೇ ಅವಧಿ ಇರಲಿದೆ. ಅಕ್ಟೋಬರ್ 10ರಿಂದ 20ರವರೆಗೆ ದಸರಾ ರಜೆ ಇರಲಿದೆ. ಕೊರೊನಾ ಸಂಕಷ್ಟದ ಕಾರಣಕ್ಕೆ ಭೌತಿಕವಾಗಿ ಶಾಲೆ ನಡೆಸಲು ಸಾಧ್ಯವಾಗದಿದ್ದರೆ ಆನ್ ಲೈನ್, ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಮಾಡಬಹುದಾಗಿದೆ ಎಂದು ಸುತ್ತೋಲೆ ಹೊರಡಿಸಿದೆ.









