ಮೈಸೂರು: ಪೊಲೀಸರು ಜನರಿಗೆ ನ್ಯಾಯ ಕೊಡಿಸುತ್ತಾರೆಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಆದರೆ, ಅದೇ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ರೊಬ್ಬರು ಮತ್ತೊಬ್ಬ ಮಹಿಳಾ ಸಬ್ ಇನ್ಸ್‍ಪೆಕ್ಟರ್‍ಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‍ಐ ಆನಂದ್ ವಿರುದ್ಧ ಅದೇ ಮೈಸೂರಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪಿಎಸ್‍ಐ ಒಬ್ಬರು ದೂರು ನೀಡಿತ್ತು ಎಫ್‍ಐಆರ್ ದಾಖಲಾಗಿದೆ.

ಪಿಎಸ್‍ಐ ಆನಂದ್ ಹಾಗೂ ಮಹಿಳಾ ಪಿಎಸ್‍ಐ ನಡುವೆ ಪ್ರೇಮಾಂಕುರವಾಗಿ ಹಲವು ಕಡೆ ಓಡಾಟ ನಡೆಸಿದ್ದರಂತೆ. ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ಪಿಎಸ್‍ಐ ದೈಹಿಕ ಸಂಪರ್ಕ ಹೊಂದಿದ್ದರಂತೆ. ಆದರೆ, ಮಹಿಳಾ ಪಿಎಸ್‍ಐ ಗರ್ಭವತಿಯಾದ ನಂತರ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಆನಂದ್ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಿಎಸ್‍ಐ ಆನಂದ್ ಮತ್ತೊಂದು ಮದುವೆಯಾಗಿರುವ ಬಗ್ಗೆಯೂ ಆರೋಪಿಸಿರುವ ಲೇಡಿ ಪಿಎಸ್‍ಐ, ನನಗೆ ಬಲವಂತದ ಗರ್ಭಪಾತ ಮಾಡಿಸಿದ್ದು, ತನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳಾ ಪಿಎಸ್‍ಐ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 376, 406, 313, 354, 417, 504, 506, 509 ಅಡಿ ಪಿಎಸ್‍ಐ ಆನಂದ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








