ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಆದರೂ ಜನರು ರಸ್ತೆಗಳಲ್ಲಿ ಅಡ್ಡಾಡುತ್ತಲೇ ಇದ್ದಾರೆ. ಕೊರೊನಾ ತಡೆಗಟ್ಟಲು ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡ್ತಾನೆ ಇದ್ದಾರೆ. ರಸ್ತೆಗಳಲ್ಲಿ ನಿಂತು ಟ್ರಾಫಿಕ್ ಪೊಲೀಸರು, ವಾಹನ ಸವಾರರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾಯ್ತು.. ಕೊರೊನಾ ಹೆಲ್ಮೆಟ್ ಹಾಕಿಕೊಂಡು ಜನರಲ್ಲಿ ಮನವಿ ಮಾಡಿದ್ದೂ ಆಯ್ತು. ಇದೀಗ ಇಲ್ಲೊಬ್ಬ ಪೊಲೀಸಪ್ಪ ಕೊಂಚ ಡಿಫರೆಂಟಾಗಿ ಕುದುರೆ ಏರಿ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸ್ತಿದ್ದಾರೆ.
ಹೌದು..! ಕರ್ನೂಲ್ ಜಿಲ್ಲೆಯ ಪೀಪಲ್ಲಿ ಮಂಡಲದ ಸಬ್ ಇನ್ಸ್ ಪೆಕ್ಟರ್ ಮಾರುತಿ ಸಂಕರ್, ಕುದುರೆ ಏರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ. ವಿಶೇಷ ಅಂದ್ರೆ ಬಿಳಿ ಕುದುರೆ ಮೇಲೆ ಕೆಂಪು ಬಣ್ಣದಲ್ಲಿ ಕೊರೊನಾ ವೈರಸ್ ಚಿತ್ರಗಳನ್ನ ಬಿಡಿಸೋ ಮೂಲಕ ಈ ಸಬ್ ಇನ್ಸ್ ಪೆಕ್ಟರ್, ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದಾರೆ.








