ಬಾಲಿವುಡ್ ಖಾನ್ ಗಳ ಆಸ್ತಿ ತನಿಖೆಗೆ ಸುಬ್ರಮಣಿ ಸ್ವಾಮಿ ಪಟ್ಟು
ಮುಂಬೈ, ಜುಲೈ 12: ಕೇಂದ್ರ ಸಚಿವ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ‘ಖಾನ್ ಮಸ್ಕಿಟೀರ್ಸ್ ಇನ್ ಇಂಡಿಯಾ’ದ ಆಸ್ತಿಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ್ದಾರೆ. ಬಾಲಿವುಡ್ ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಶನಿವಾರ ಒತ್ತಾಯಿಸಿದ್ದಾರೆ.
ಬಾಲಿವುಡ್ ಖಾನ್ ಗಳು ಭಾರತ ಸೇರಿದಂತೆ ವಿದೇಶಗಳಲ್ಲೂ ಆಸ್ತಿಗಳನ್ನು ಹೊಂದಿದ್ದು, ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ. ಸಲ್ಮಾನ್ ಖಾನ್, ಅಮಿರ್ ಖಾನ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ನ ದೊಡ್ಡ ಸ್ಟಾರ್ ಗಳು ಭಾರತದ ಹಲವೆಡೆ ಆಸ್ತಿಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ವಿದೇಶದಲ್ಲಿ ಕೂಡ ಮನೆ, ವಿಲ್ಲಾ, ಬಂಗಲೆಗಳನ್ನೂ ಹೊಂದಿದ್ದಾರೆ. ಇವರು ವಿದೇಶದಲ್ಲಿ ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿ ಇಡಿ ಹಾಗೂ ಸಿಬಿಐನ ತನಿಖೆಯ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಾಲಿವುಡ್ ಖಾನ್ ಗಳು ವಿದೇಶದಲ್ಲಿ ಅದರಲ್ಲೂ ದುಬೈನಲ್ಲಿ ಫ್ಲ್ಯಾಟ್, ಬಂಗಲೆ, ವಿಲ್ಲಾ ಹೊಂದಿದ್ದು, ಇದರ ತನಿಖೆ ನಡೆಸಬೇಕಾಗಿದೆ. ಅದನ್ನು ಅವರೇ ಖರೀದಿಸಿದರೇ?ಅವರು ಖರೀದಿಸಿರುವುದಾಗಿದ್ದರೆ ವಿದೇಶದಲ್ಲಿ ಹೇಗೆ ಖರೀದಿಸಿದರು? ಅಥವಾ ಉಡುಗೊರೆಯಾಗಿ ಯಾರಾದರೂ ನೀಡಿದರೆ? ಎಂದೆಲ್ಲಾ ಸತ್ಯಾಸತ್ಯತೆ ಹೊರಬರುವ ಅಗತ್ಯವಿದೆ. ಹಾಗಾಗಿ ಈ ಕುರಿತು ಸಮಗ್ರ ತನಿಖೆ ನಡೆಯಲೇ ಬೇಕು ಎಂದು ಒತ್ತಾಯಿಸಿದ ಸುಬ್ರಮಣಿಯನ್ ಸ್ವಾಮಿ ಇವರೇನು ಕಾನೂನಿಗಿಂತ ದೊಡ್ಡವರಲ್ಲ ಎಂದು
ಹೇಳಿದ್ದಾರೆ.