kicchha sudeep
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ.
ಕಿಚ್ಚ ಸುದೀಪ್ ಹಾಗೂ ಪ್ರಿಯಾ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಇಂದಿಗೆ 19 ವರ್ಷ ಪೂರ್ಣಗೊಂಡಿದೆ.
ಈ ಜೋಡಿಗೆ ಅಭಿಮಾನಿಗಳು, ಚಿತ್ರರಂಗದವರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಈ ದಿನವನ್ನು ಸುದೀಪ್ ದಂಪತಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದಾರೆ.
ಅಭಿಮಾನಿಗಳು ಕಿಚ್ಚ ದಂಪತಿಯ ಫೋಟೋಗಳನ್ನು ಶೇರ್ ಮಾಡಿ ವಿಶ್ ಮಾಡುತ್ತಿದ್ದಾರೆ.
ಸುದೀಪ್ 2000ರಲ್ಲಿ ಪ್ರಿಯಾ ರಾಧಕೃಷ್ಣರನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದರು.
ಬಳಿಕ 2001 ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಇಬ್ಬರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು.
ಪ್ರಿಯಾ ಮದುವೆಗೂ ಮೊದಲು ಏರ್ ಲೈನ್ಸ್ ಮತ್ತು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.
ಈ ಜೋಡಿ 2004ರಲ್ಲಿ ಮೊದಲ ಮಗುವಿನ ತಂದೆ-ತಾಯಿ ಆಗಿದ್ದಾರೆ.
ತಂದೆಯಂತೇ ಮಗಳು… ಯೋಗರಾಜ ಭಟ್ಟರ ಮಗಳು
ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳ ಹೆಸರು ಸಾನ್ವಿ.
ಸ್ಯಾಂಡಲ್ ವುಡ್ ನ ಟಾಪ್ ನಟರಾಗಿರುವ ಸುದೀಪ್ ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಈ ಹೈ ಬಜೆಟ್ ಸಿನಿಮಾದ ಶೂಟಿಂಗ್ ಬಿರುಸಿನಿಂದ ನಡೆಯುತ್ತಿದೆ.
ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ.
ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
ಇನ್ನೂ ಸುದೀಪ್ ಅವರ ಪತ್ನಿ ಸದ್ಯ ಈವೆಂಟ್ ಮ್ಯಾನೇಜ್ ಮೆಂಟ್ ವ್ಯವಹಾರ ನೋಡಿಕೊಳ್ತಾಯಿದ್ದಾರೆ.
kicchha sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








