sudeep
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ 78ನೇ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ನ “ಬಚ್ಚನ್” (sudeep) ಅವರು ಶುಭ ಕೋರಿದ್ದಾರೆ. ಹೌದು “ಬಾಲಿವುಡ್ ಮೆಗಾಸ್ಟಾರ್” ಬರ್ತಡೇಗೆ ಕಿಚ್ಚ ಸುದೀಪ್ ಅವರು ಟ್ವೀಟ್ ಮೂಲಕ ಶುಭಕೋರಿದ್ದಾರೆ.
ಟ್ವಿಟ್ಟರ್ ನಲ್ಲಿ ಅಮಿತಾಬ್ ಅವರೊಂದಿಗೆ ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿರುವ ಕಿಚ್ಚ”ನಿಮ್ಮನ್ನು ಹತ್ತಿರದಿಂದ ನೋಡುವ ಮತ್ತು ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ಪಡೆದಿರುವುದು ನನಗೆ ಆಶೀರ್ವಾದ” ಎಂದು ಅಡಿಬರಹ ಕೊಟ್ಟಿದ್ದಾರೆ.
ದಸರಾ ಹಬ್ಬಕ್ಕೆ ಮತ್ತೆ ತೆರೆಮೇಲೆ ಬರುತ್ತಿದೆ ರಾಧಿಕಾ ಕುಮಾರಸ್ವಾಮಿಯವರ “ದಮಯಂತಿ”..!
ಅಲ್ಲದೇ ”ನಿಮ್ಮ ವ್ಯಕ್ತಿತ್ವ ಮತ್ತು ಮೋಡಿ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಬಚ್ಚನ್ ಸರ್. ಇನ್ನೂ ಹಲವು ವರ್ಷಗಳ ಕಾಲ ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮನ್ನು ಹತ್ತಿರದಿಂದ ನೋಡುವ ಮತ್ತು ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ಪಡೆದಿರುವುದು ನನಗೆ ಆಶೀರ್ವಾದ. ಹುಟ್ಟುಹಬ್ಬದ ಶುಭಾಶಯಗಳು ಸರ್” ಎಂದು ವಿಶ್ ಮಾಡಿದ್ದಾರೆ.
ಇನ್ನೂ ಕಿಚ್ಚ ಸುದೀಪ ಅವರು ಅಮಿತಾಬ್ ಬಚ್ಚನ್ ಅವರ ಜೊತೆಗೆ ಒಟ್ಟು ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡಿದ್ದ ‘ರಣ್’ ಚಿತ್ರದಲ್ಲಿ ಅಮಿತಾಭ್ ಜೊತೆ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಅದೇ ರೀತಿ 2020ರ ಆರಂಭದಲ್ಲಿ ತೆರೆಕಂಡ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲೂ ಅಮಿತಾಬ್ ಮತ್ತು ಸುದೀಪ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








